ಉತ್ತರ ಕೊರಿಯಾ ಪರಮಾಣು ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ: ದಕ್ಷಿಣ ಕೊರಿಯಾ ಪ್ರಧಾನಿ ಆತಂಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರ ಕೊರಿಯಾ ಪರಮಾಣು ಅಣ್ವಸ್ತ್ರವನ್ನು ಪರೀಕ್ಷಿಸಲು ಸಿದ್ಧವಾಗಿದೆ ಮತ್ತು ಅದನ್ನು ಶೀಘ್ರದಲ್ಲೇ ನಡೆಸುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಪ್ರಧಾನಿ ಹಾನ್ ಡಕ್-ಸೂ ಹೇಳಿದ್ದಾರೆ.
ಪರೀಕ್ಷೆಯು ಯಾವಾಗ ಸಂಭವಿಸುತ್ತದೆ ಎಂದು ನಿಖರವಾಗಿ ಹೇಳುವುದು ಕಷ್ಟವಾದರೂ, ʼಅವರು ಸಿದ್ಧರಾಗಿದ್ದಾರೆ ಎಂಬ ಮಾಹಿತಿಯನ್ನು ನಾವು ಸಂಗ್ರಹಿಸಿದ್ದೇವೆ” ಎಂದು ದಕ್ಷಿಣ ಕೊರಿಯಾದ ಪ್ರಧಾನ ಮಂತ್ರಿ ಹೇಳಿದ್ದಾರೆ.
ಕೊರಿಯನ್ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಿರುವ ಸಮಯದಲ್ಲಿ ಈ ಹೇಳಿಕೆಗಳು ಹೊರಬಿದ್ದಿವೆ. ಪರಮಾಣು ಪರೀಕ್ಷೆಯನ್ನು ಕೈಗೊಂಡರೆ, 2017 ರ ಬಳಿಕ ಈಗಾಗಲೇ ಬಹಳ ಉದ್ವಿಗ್ನಗೊಂಡಿರುವ ಪ್ರದೇಶದಲ್ಲಿ ಸಂಘರ್ಷ ಉಲ್ಬಣವಾಗಬಹುದು.
2011 ರಲ್ಲಿ ನಾಯಕ ಕಿಮ್ ಜಾಂಗ್ ಉನ್ ಅಧಿಕಾರಕ್ಕೆ ಬಂದಾಗಿನಿಂದ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿಗಳು ಸೇರಿದಂತೆ ಹೆಚ್ಚಿನ ಕ್ಷಿಪಣಿಗಳನ್ನು ಉಡಾಯಿಸುತ್ತಲೇ ಇದೆ. ಅಂತಹ ಅನಪೇಕ್ಷಿತ ಕ್ರಮಕ್ಕೆ ನಾವು ತಕ್ಕ ಸಿದ್ಧತೆಗಳನ್ನು ಹೊಂದಿದ್ದೇವೆ” ಎಂದು ದಕ್ಷಿಣ ಕೊರಿಯಾದ ಪ್ರಧಾನಿ ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!