ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಾಣದೇ 40 ದಿನವಾಯ್ತು! ಎಲ್ಲಿ ಹೋದ್ರು ಕಿಮ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೆ ಕಾಣಿಸುತ್ತಿಲ್ಲ. ಹೌದು, 40 ದಿನಗಳಿಂದ ಸಾರ್ವಜನಿಕವಾಗಿ ಕಿಮ್ ಕಾಣಿಸಿಕೊಂಡಿಲ್ಲ. ಈ ಬೆನ್ನಲ್ಲೇ ಕಿಮ್ ಆರೋಗ್ಯದ ಬಗ್ಗೆ ಊಹಾಪೋಹಗಳೆದ್ದಿವೆ.

ಭಾನುವಾರ ಕಮ್ಯುನಿಸ್ಟ್ ಪಕ್ಷದ ಸಭೆಗೆ ಕಿಮ್ ಬರಬೇಕಿತ್ತು ಆದರೆ ಅಲ್ಲಿಗೂ ಕಿಮ್ ಹಾಜರಾಗಿಲ್ಲ, ಇದೊಂದು ಮಹತ್ವದ ಸಭೆಯಾಗಿದ್ದು, ಇದನ್ನು ತಪ್ಪಿಸುವ ಸಾಧ್ಯತೆಯೇ ಇರಲಿಲ್ಲ. ಇಲ್ಲಿಯೂ ಕಿಮ್ ಕಾಣಿಸದ ಕಾರಣ ಕಿಮ್‌ಗೆ ಅನಾರೋಗ್ಯ ಕಾಡುತ್ತಿದೆಯಾ ಎನ್ನುವ ಊಹಾಪೋಹ ಎದುರಾಗಿದೆ.

ಫೆ.8 ಕೊರಿಯನ್ ಪೀಪಲ್ಸ್ ಆರ್ಮಿ ಸ್ಥಾಪನೆಯ 75 ನೇ ವಾರ್ಷಿಕೋತ್ಸವ ಆಚರಣೆ ಇದ್ದು, ಇಲ್ಲಿ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜನೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಕಿಮ್ ಬರುತ್ತಾರಾ ಇಲ್ಲವಾ ಕಾದುನೋಡಬೇಕಿದೆ. ಕಿಮ್ ಅವರಿಗೆ ಅನಾರೋಗ್ಯ ಕಾಡುತ್ತಿದೆ ಎಂದು ಕೊರಿಯಾ ಮಾಧ್ಯಮಗಳು ವರದಿ ಮಾಡಿವೆ. ಕಿಮ್ ಜಾಂಗ್ ಉನ್ ಹಲವು ಬಾರಿ ಇದ್ದಕ್ಕಿದ್ದಂತೆಯೇ ನಾಪತ್ತೆ ಆಗಿದ್ದಾರೆ, 2014ರಲ್ಲಿಯೂ 40 ದಿನ ಯಾವುದೇ ಸಾರ್ಚಜನಿಕ ಕಾರ್ಯಕ್ರಮದಲ್ಲಿ ಕಿಮ್ ಕಾಣಿಸಿಕೊಂಡಿರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!