ಇರೋ ಒಂದು ಕೆಲ್ಸನೂ ಸರಿಯಾಗಿ ಮಾಡೋಕಾಗಲ್ಲ: ತಪಾಸಣೆ ಇಲ್ಲದೇ ಎಫ್‌ಸಿ ಕೊಟ್ಟ ಆರ್‌ಟಿಒ ವಿರುದ್ಧ ಎಫ್‌ಐಆರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ತಪಾಸಣೆ ನಡೆಸದೇ 10,210ಕ್ಕೂ ಅಧಿಕ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ (ಎಫ್‌ಸಿ) ನೀಡಿದ ಆರೋಪದ ಮೇಲೆ ನಿವೃತ್ತ ಮೋಟಾರ್ ವಾಹನ ನಿರೀಕ್ಷಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಫೆಬ್ರವರಿ 28ರಂದು ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಕೀಲರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಸಾರಿಗೆ ಇಲಾಖೆ ತನಿಖೆ ಆರಂಭಿಸಿತ್ತು. ವಾಹನ್ ಪೋರ್ಟಲ್‌ನ ದಾಖಲೆಗಳ ಪರಿಶೀಲನೆಯಲ್ಲಿ ಗುಜರಾತ್, ಮಹಾರಾಷ್ಟ್ರ ಹಾಗೂ ಕೇರಳ ಮೂಲದ ವಾಹನಗಳಿಗೂ ಪ್ರಮಾಣಪತ್ರ ನೀಡಿರುವುದು ಬೆಳಕಿಗೆ ಬಂದಿದೆ. … Continue reading ಇರೋ ಒಂದು ಕೆಲ್ಸನೂ ಸರಿಯಾಗಿ ಮಾಡೋಕಾಗಲ್ಲ: ತಪಾಸಣೆ ಇಲ್ಲದೇ ಎಫ್‌ಸಿ ಕೊಟ್ಟ ಆರ್‌ಟಿಒ ವಿರುದ್ಧ ಎಫ್‌ಐಆರ್