SHOCKING | ಅಮ್ಮ ಬದುಕಿಲ್ಲ ಎಂದು ಗೊತ್ತಿಲ್ಲದೆ, ಮೃತದೇಹದ ಪಕ್ಕ ಎರಡು ದಿನ ಮಲಗಿದ್ದ ಬಾಲಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ತಾಯಿ ಮೃತದೇಹದ ಜತೆ ಬಾಲಕನೊಬ್ಬ ಎರಡು ದಿನ ಕಳೆದ ಹೃದಯ ವಿದ್ರಾವಕ ಘಟನೆ ನಡೆದಿದೆ. ಗಂಗಾ ನಗರದಲ್ಲಿ ವಾಸವಿದ್ದ ಅಣ್ಣಮ್ಮ ಮನೆಯಲ್ಲಿಯೇ ಹಠಾತ್ ನಿಧನರಾಗಿದ್ದಾರೆ, ತಾಯಿ ಮಲಗಿದ್ದಾರೆ ಎಂದು ತಿಳಿದೇ ಎರಡು ದಿನ ಮೃತದೇಹದ ಜತೆ ಸಮಯ ಕಳೆದಿದ್ದಾನೆ.

11 ವರ್ಷದ ಬಾಲಕ ಅಮ್ಮ ಅಡುಗೆ ಮಾಡಿಲ್ಲ ಎಂದು ಹೇಳುತ್ತಾ ಅಕ್ಕ ಪಕ್ಕದವರ ಮನೆಯಲ್ಲೇ ಊಟ ಮಾಡಿಕೊಂಡು ಮನೆಯಂಗಳದಲ್ಲಿ ಆಟವಾಡುತ್ತಾ ದಿನಕಳೆಯುತ್ತಿದ್ದ.

ರಾತ್ರಿ ಬಂದು ತಾಯಿಯ ಮೃತದೇಹದ ಪಕ್ಕವೇ ಮಲಗುತ್ತಿದ್ದ, ಎರಡು ದಿನದ ನಂತರ ಮೃತದೇಹದಿಂದ ವಾಸನೆ ಬಂದಿದ್ದು, ಮನೆಯಲ್ಲಿ ಏನೋ ವಾಸನೆ ಎಂದು ಅಕ್ಕಪಕ್ಕದವರಿಗೆ ತಿಳಿಸಿದ್ದಾನೆ.

ಪರಿಶೀಲಿಸಿದಾಗ ಮಹಿಳೆ ಮೃತಪಟ್ಟಿರುವುದು ತಿಳಿದುಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪರೀಕ್ಷೆ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!