HEALTH | ಉಗುರಗಳ ಸೌಂದರ್ಯ ಅಷ್ಟೇ ಅಲ್ಲ, ಶುಚಿ ಬಗ್ಗೆಯೂ ಯೋಚಿಸಿ.. ಉಗುರುಗಳ ಆರೋಗ್ಯ ಹೀಗೆ ಕಾಪಾಡಿ..

ಉಗುರುಗಳನ್ನು ತರ ತರದ ಶೇಪ್‌ನಲ್ಲಿ ಕತ್ತರಿಸೋದು, ಅದಕ್ಕೆ ಬಣ್ಣ ಬಣ್ಣದ ಪೇಂಟ್ ಹಚ್ಚೋದು, ಅದಕ್ಕೂ ಡಿಸೈನ್ ಮಾಡೋದು ಹೀಗೆ ಸಾಕಷ್ಟು ಸ್ಟೈಲ್ ಮಾಡ್ತೇವೆ. ಆದರೆ ರೋಗ ಹರಡುವಲ್ಲಿ ಕೊಳೆಯಾದ ಉಗುರುಗಳೂ ಕಾರಣವಾಗಿದೆ. ಉಗುರುಗಳನ್ನು ಶುಚಿಯಾಗಿ ಇಟ್ಟುಕೊಳ್ಳೋಕೆ ಟಿಪ್ಸ್..

  • ಆದಷ್ಟು ಚಿಕ್ಕ ಉಗುರು ಬಿಟ್ಟು ಇನ್ನೆಲ್ಲಾ ಕತ್ತರಿಸಿ, ಉಗುರು ಉದ್ದ ಇದ್ದಷ್ಟು ಕೊಳೆ ಕೂರೋದು ಸಾಮಾನ್ಯ
  • ಪ್ರತಿ ಬಾರಿ ಹ್ಯಾಂಡ್ ವಾಶ್ ಬಳಸಿ ಕೈ ತೊಳೆಯಿರಿ, ಉಗುರು ಅಡಿಯ ಬ್ಯಾಕ್ಟೀರಿಯಾ ತೊಲಗಲಿ
  • ಮುಖಕ್ಕೆ ಮಾಯಿಶ್ಚರೈಸರ್ ಅಗತ್ಯದಂತೆ ಕೈಗೂ ಮಾಯಿಶ್ಚರೈಸರ್ ಬೇಕಿದೆ. ಉಗುರಿಗೆ ಅದನ್ನು ಹಚ್ಚಿ.
  • ಚೂಪಾದ ಕಟರ್‌ನಿಂದ ಉಗುರು ಕತ್ತರಿಸಿ
  • ಹೆಚ್ಚು ಕೆಮಿಕಲ್ ಬಳಸಿ ಮಾಡುವ ಮೆನಿಕ್ಯೂರ್‌ಗಳನ್ನು ಕಡಿಮೆ ಮಾಡಿ
  • ಉಗುರು ಕಚ್ಚುವುದು, ಉಗುರಿನ ತುದಿಗಳನ್ನು ಕಚ್ಚಿ ತಿನ್ನುವ ಅಭ್ಯಾಸ ನಿಲ್ಲಿಸಿ
  • ಉಗುರಿನ ಸುತ್ತ ಇರುವ ಚರ್ಮವನ್ನು ತಿನ್ನಬೇಡಿ, ಇದು ಅನಾರೋಗ್ಯಕರ.
  • ಉದ್ದುದ್ದ ಉಗುರು ಬಿಡುವಾಗ ಅವುಗಳ ಆರೋಗ್ಯದ ಬಗ್ಗೆ ಗಮನ ಇರಲಿ, ಪದೇ ಪದೆ ಉಗುರು ಕತ್ತರಿಸಿಹೋದರೆ, ಉಗುರಿನ ಬಣ್ಣ ಬದಲಾದರೆ ಅದು ಯಾವುದಾದರೂ ಕಾಯಿಲೆಯ ಸಂಕೇತವಾಗಿದೆ.
  • ಮನೆಯಲ್ಲಿ ಮಕ್ಕಳಿರುವವರು ಉದ್ದ ಉಗುರು ಬಿಡಲೇಬೇಡಿ, ಮಕ್ಕಳಿಗೆ ಉಗುರಿನಿಂದ ಗಾಯ ಆದರೆ ಕಲೆ ಹೋಗೋದಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!