ಗಮನಿಸಿ… ಇನ್ಮುಂದೆ ಮೆಟ್ರೋ ರೈಲು ಮೇಲೆ ಕಲ್ಲು ತೂರಾಟ ನಡೆಸಿದರೆ ಎಫ್‌ಐಆರ್ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಮ್ಮ ಮೆಟ್ರೋ ಮೇಲೆ ಇನ್ಮುಂದೆ ಕಲ್ಲು ತೂರಾಟ ನಡೆಸಿದ್ರೇ, ಅವರ ವಿರುದ್ಧ ದೂರು ದಾಖಲಿಸೋದಾಗಿಬಿಎಂಆರ್ ಸಿಎಲ್ ತಿಳಿಸಿದೆ.
ಕಲ್ಲು ತೂರಾಟ ನಡೆಸೋ ಪ್ರದೇಶಗಳ ವ್ಯಾಪ್ತಿಯಲ್ಲಿ ಸಿಸಿಟಿವಿ ಕೂಡ ನಮ್ಮ ಮೆಟ್ರೋ ಅಳವಡಿಸಿದೆ. ದಿನದ 24 ಗಂಟೆಗಳು ಕ್ಯಾಮರಾ ಆನ್ ಆಗಿರಲಿವೆ. ನಮ್ಮ ಮೆಟ್ರೋ ರೈಲು ಸಂಚಾರದ ಸಮಯದಲ್ಲಿ ಕಲ್ಲು ತೂರಾಟ ನಡೆಸಿದ್ರೇ, ಆ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸ್ ಠಾಣೆಗೆ ದೂರು ನೀಡಲು ನಿಗಮ ನಿರ್ಧರಿಸಿದೆ.
ಸುರಂಗ ಮಾರ್ಗ, ಎಲಿವೇಡೆಟ್ ಕನೆಕ್ಟಿಂಗ್ ಜಂಕ್ಷನ್ ಗಳಲ್ಲಿ ಸೆಕ್ಯೂರಿಟಿ ಅಲರ್ಟ್ ಕೂಡ ಮಾಡುವಂತ ತೀರ್ಮಾನವನ್ನು ಕೈಗೊಂಡಿದೆ. ಇನ್ಮುಂದೆ ಮೆಟ್ರೋ ರೈಲು ಮೇಲೆ ಕಲ್ಲು ತೂರಿ, ಸಿಕ್ಕಿ ಬಿದ್ರೇ.. ಅವರ ವಿರುದ್ಧ ಎಫ್‌ಐಆರ್ ದಾಖಲಾಗೋದು ಫಿಕ್ಸ್ ಆದಂತೆ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!