ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಆಹಾರ ಸರಬರಾಜು ಸಂಸ್ಥೆಗಳಲ್ಲಿ ಒಂದಾಗಿರುವ ಜೊಮ್ಯಾಟೊ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ತನ್ನ ಸೇವೆಯಲ್ಲಿ ಒಂದು ವಿಭಾಗವನ್ನೇ ಸ್ಥಗಿತಗೊಳಿಸಲು ನಿರ್ಧರಿಸಿದೆ. ಇದು ಸೆ. 17ರಿಂದಲೇ ಜಾರಿಗೆ ಬರಲಿದೆ.
ತನ್ನ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದ ದಿನಸಿ ರವಾನೆಯನ್ನು ಸ್ಥಗಿತಗೊಳಿಸಲು ಜೊಮ್ಯಾಟೊ ನಿರ್ಧರಿಸಿದೆ. ಗ್ರಾಸರಿ ಡೆಲಿವರಿ ವ್ಯವಸ್ಥೆ ಸ್ಥಗಿತಗೊಳಿಸಿ ಫುಡ್ ಡೆಲಿವರಿಯನ್ನು ಎಂದಿನಂತೆಯೇ ಮುಂದುವರಿಸಲಿದೆ.
ತನ್ನ ಈ ನಿರ್ಧಾರದ ಕುರಿತು ಸಂಸ್ಥೆಯು ದಿನಸಿ ಪಾಲುದಾರರಿಗೆಲ್ಲರಿಗೂ ಇ-ಮೇಲ್ ಮೂಲಕ ಮಾಹಿತಿ ನೀಡಿದ್ದು, ದಿನಸಿ ರವಾನೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.
ಮತ್ತೊಂದೆಡೆ ದಿನಸಿ ವಿತರಣೆ ಸಂಸ್ಥೆಯಾಗಿರುವ ಗ್ರೋಫರ್ಸ್ನಲ್ಲಿ ಜೊಮ್ಯಾಟೊ ಹೂಡಿಕೆ ಮಾಡಿದ್ದು, ಜೊಮ್ಯಾಟೊದಲ್ಲೇ ದಿನಸಿ ವಿತರಣೆ ವ್ಯವಸ್ಥೆ ನೀಡುವುದಕ್ಕಿಂತ ಈ ಹೊಸ ಹೂಡಿಕೆ ಮೂಲಕ ಅದನ್ನು ಮುಂದುವರಿಸುವುದೇ ಹೆಚ್ಚು ಸೂಕ್ತ ಎಂಬ ನಿಟ್ಟಿನಲ್ಲಿ ಸಂಸ್ಥೆ ಈ ನಿರ್ಧಾರ ತಳೆದಿದೆ ಎನ್ನಲಾಗಿದೆ.