Sunday, August 14, 2022

Latest Posts

ಮಹಿಳೆಯರ ಸಹಕಾರವಿಲ್ಲದಿದ್ದರೆ ಏನನ್ನೂ ಸಾಧಿಸಲಾಗದು: ಸಚಿವ ನಾರಾಯಣಗೌಡ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ವರದಿ ಮಂಡ್ಯ:

ಯಶಸ್ವೀ ಪುರುಷನ ಹಿಂದೆ ಮಹಿಳೆಯ ಪಾತ್ರ ಅಪಾರವಾಗಿದ್ದು, ಅದರಂತೆ ನಮ್ಮ ಮನೆಯಲ್ಲೂ ಸಹ ನನ್ನ ಪತ್ನಿ ಮತ್ತು ಮಕ್ಕಳು ಸಹಕಾರ ನೀಡದ್ದಿರೆ ಇಷ್ಟು ದೊಡ್ಡ ಮಟ್ಟದ ನಾಯಕನಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಗೌರಿ-ಗಣೇಶ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಬಾಗೀನ ಕಾರ‌್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸುಖೀ ಮತ್ತು ಬಡತನದ ಕುಟುಂಬ. ಉದ್ಯೋಗ ಅರೆಸಿ ಮುಂಬೈಗೆ ಹೋಗಿದ್ದೆಘಿ. ನಾನು ಮತ್ತು ನನ್ನ ಪತ್ನಿ ಬಡತನದಲ್ಲೂ ತುಂಬಾ ಕಷ್ಟ ಅನುಭವಿಸಿದ್ದೇವೆ. ಪ್ರಾರಂಭದ ದಿನಗಳಲ್ಲಿ ನನ್ನ ತಾಯಿ ಜೊತೆಯಾಗಿದ್ದರು, ಬಳಿಕ ನನ್ನ ಪತ್ನಿ ನನಗೆ ಸಾತ್ ನೀಡಿದ್ದರು. ಅವರು ನನ್ನನ್ನು ಮನೆಯಿಂದ ಹೊರಗೆ ಕಳುಹಿಸಲಿಲ್ಲ ಎಂದಾಗಿದ್ದರೆ ನಾನು ಇವತ್ತು ಮಂತ್ರಿಯಾಗಿ ನಿಮ್ಮ ಮುಂದೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿವರಿಸಿದರು.
ಮುಂಬೈನಂತಹ ಮಹಾನಗರದಲ್ಲಿ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡಿಗರ ಸಂಘವನ್ನು ಕಟ್ಟಿ ಬೆಳೆಸಿದ್ದೆಘಿ. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಮೂರ್ನಾಲ್ಕು ದಿನಗಳ ಕಾಲ ಮನೆಗೆ ಬಾರದ ಸ್ಥಿತಿಯೂ ಇತ್ತುಘಿ. ಅಂದು ನನ್ನ ಪತ್ನಿ ದೇವಕಿ ಮಕ್ಕಳನ್ನು ಸರಿಯಾಗಿ ನೋಡಿಕೊಂಡಿದ್ದೂ ಅಲ್ಲದೆ, ಇರುವಷ್ಟರಲ್ಲಿ ಖುಷಿ ಪಟ್ಟಿದ್ದಾರೆ. ಹಬ್ಬಗಳ ಸಂದರ್ಭದಲ್ಲೂ ತುಂಬಾ ಸಂಭ್ರಮಪಟ್ಟಿದ್ದೇವೆ. ಇಂತಹ ಸಂಭ್ರಮದ ದಿನ ಎಲ್ಲ ನನ್ನ ಸಹೋದರಿಯರಿಗೆ ಬಾಗೀನ ನೀಡಬೇಕೆಂಬ ಉದ್ದೇಶದಿಂದ ಈ ಕಾರ‌್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss