ಕಮಿಷನ್ ನೀಡದೆ ಉತ್ತರಾಖಂಡದಲ್ಲಿ ಏನೂ ಆಗುವುದಿಲ್ಲ: ಮಾಜಿ ಸಿಎಂ ತಿರತ್ ಸಿಂಗ್ ರಾವತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರಾಖಂಡ್‌ನ ಮಾಜಿ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರು ರಾಜ್ಯದಲ್ಲಿ ಕಮೀಷನ್‌ ದಂಧೆಯ ಬಗ್ಗೆ ಆಡಳಿತಾರೂಢ ಸರ್ಕಾರವನ್ನು ದೂರಿದ್ದಾರೆ. ನಿರ್ದಿಷ್ಟ ಕಮಿಷನ್ ನೀಡದೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಮಾಜಿ ಸಿಎಂ ರಾಜ್ಯದ ಕಮಿಷನ್ ಸಂಸ್ಕೃತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾನು ಮುಖ್ಯಮಂತ್ರಿಯಾಗಿದ್ದರೂ, ಬಹುಶಃ ಇದನ್ನು ಹೇಳಬಾರದು, ನಾವು ಉತ್ತರ ಪ್ರದೇಶದಿಂದ ಬೇರ್ಪಟ್ಟಾಗ, ಸಾರ್ವಜನಿಕ ಕೆಲಸಗಳನ್ನು ಮಾಡಲು ಅಲ್ಲಿ 20 ಪ್ರತಿಶತದಷ್ಟು ಕಮಿಷನ್ ನೀಡಲಾಗುತ್ತಿತ್ತು ಎಂಬುದನ್ನು ಒಪ್ಪಿಕೊಳ್ಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ” ಎಂದು ರಾವತ್ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

“ಬೇರ್ಪಟ್ಟ ನಂತರ, ಇದು ಇಲ್ಲಿ ಶೂನ್ಯಕ್ಕೆ ಬರಬೇಕಿತ್ತು ಆದರೆ ಅಭ್ಯಾಸವು ಮುಂದುವರೆಯಿತು ಮತ್ತು ನಾವು ಶೇಕಡಾ 20 ರೊಂದಿಗೆ ಪ್ರಾರಂಭಿಸಿದ್ದೇವೆ.” ಎಂದು ಬಿಜೆಪಿ ಸಂಸದರು ಹೇಳಿರುವುದಾಗಿ ವರದಿಯಾಗಿದೆ.

“ಇದು ಒಂದು ಮನಸ್ಥಿತಿ. ನಾವು ನಮ್ಮ ರಾಜ್ಯವನ್ನು ನಮ್ಮ ಸ್ವಂತ ಕುಟುಂಬ ಎಂದು ನೋಡಲಾರಂಭಿಸಿದಾಗ ಮಾತ್ರ ಅದು ದೂರವಾಗುತ್ತದೆ” ಎಂದು ಮಾಜಿ ಸಿಎಂ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!