ದಾರಿ ತಪ್ಪಿಸೋ ಜಾಹೀರಾತು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ‘ಬೌರ್ನ್‌ವೀಟಾ’ಗೆ ನೋಟೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಬೌರ್ನ್‌ವೀಟಾ ಸಹಾಯ ಮಾಡುತ್ತದೆ, ಮಕ್ಕಳ ಆರೋಗ್ಯವನ್ನು ಇನ್ನಷ್ಟು ಸುಧಾರಿಸುತ್ತದೆ ಎಂದು ಬೌರ್ನ್‌ವೀಟಾ ಹೇಳಿಕೊಂಡಿದೆ. ಆದರೆ ಈ ಪ್ರಾಡಕ್ಟ್‌ನಲ್ಲಿ ಅರ್ಧದಷ್ಟು ಸಕ್ಕರೆಯೇ ತುಂಬಿದೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಅದರ ಮಾಲೀಕ ಮೊಂಡೆಲೆಜ್ ಇಂಡಿಯಾಗೆ ನೋಟಿಸ್ ಕಳಿಸಿದೆ.

ದಾರಿತಪ್ಪಿಸುವ ಜಾಹೀರಾತು, ನಿಜವಲ್ಲದ ಲೇಬಲ್ಸ್ ಹಾಗೂ ಪ್ಯಾಕೇಜಿಂಗ್‌ನ್ನು ತೆಗೆದು ಹಾಕುವಂತೆ ಹೇಳಲಾಗಿದ್ದು, ನೋಟೀಸ್‌ಗೆ ಏಳು ದಿನದೊಳಗೆ ಉತ್ತರ ಹಾಗೂ ವಿವರ ನೀಡುವಂತೆ ಹೇಳಲಾಗಿದೆ.

ಮಕ್ಕಳಿಗೆ ಸಕ್ಕರೆ ನೀಡುವುದು ಉತ್ತಮವಲ್ಲ, ಇದು ತೂಕ ಹೆಚ್ಚಳ, ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಈ ಬಗ್ಗೆ ರೇವಂತ್ ಹಿಮತ್ಸಿಕಾ ಎನ್ನುವ ವಿಶ್ಲೇಷಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ತಕ್ಷಣವೇ ಕಂಪನಿ ಅವರಿಗೆ ಲೀಗಲ್ ನೊಟೀಸ್ ನೀಡಿದ್ದು, ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಿಸಿತ್ತು. ಆದರೆ ಅಷ್ಟರೊಳಗಾಗಲೇ ಸಾಕಷ್ಟು ಮಂದಿ ಈ ವಿಡಿಯೋ ನೋಡಿದ್ದರು.

ಉತ್ತಮ ರುಚಿ ಹಾಗೂ ಆರೋಗ್ಯಕ್ಕಾಗಿ ತಜ್ಞರು ಹಾಗೂ ಪೌಷ್ಠಿಕತಜ್ಞರ ನಿರ್ದೇಶನದಲ್ಲಿ ಪ್ರಾಡಕ್ಟ್ ತಯಾರಾಗಿದೆ. ಇಲ್ಲಿ ಎಲ್ಲವೂ ಪಾರದರ್ಶಕವಾಗಿದೆ. ವಿಡಿಯೋದಿಂದ ಬೌರ್ನ್‌ವಿಟಾ ಸೇವಿಸುವವರಿಗೆ ಭೀತಿ ಹುಟ್ಟಿಸಿದೆ ಎಂದು ಕಂಪನಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!