Sunday, August 14, 2022

Latest Posts

ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಗೆ ನೋಟಿಸ್ ನೀಡಲು ಶಾಸಕ ನಾಗೇಂದ್ರ ಸೂಚನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….

ಹೊಸ ದಿಗಂತ ವರದಿ, ಮೈಸೂರು:

ನೋಂದಣಿಯಾಗದ ಸುಮಾರು 104 ಚಿಕ್ಕಆಸ್ಪತ್ರೆಗಳಲ್ಲಿ ಯಾವುದೇ ವ್ಯವಸ್ಥೆಗಳಿಲ್ಲದಿದ್ದರೂ ಕೋವಿಡ್ ಚಿಕಿತ್ಸೆಗೆಂದು ಸೋಂಕಿತರನ್ನು ದಾಖಲಿಸಿಕೊಂಡು ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದು, ಈ ಆಸ್ಪತ್ರೆಯವರಿಗೆ ಕೂಡಲೇ ನೋಟಿಸ್ ಜಾರಿ ಮಾಡುವಂತೆ ಶಾಸಕ ಎಲ್.ನಾಗೇಂದ್ರ ಅವರು ಡಿಎಚ್‌ಒ ಅವರಿಗೆ ಸೂಚಿಸಿದರು.
ಸೋಮವಾರ ಮೈಸೂರು ಮಹಾನಗರಪಾಲಿಕೆಯ ಸಭಾಂಗಣದಲ್ಲಿ ನಡೆದ ಚಾಮರಾಜ ವಿಧಾನ ಸಭಾ ಕ್ಷೇತ್ರದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾನ್‌ರಡಿಯಲ್ಲಿ ನೋಂದಣಿಯಾಗದ ಸುಮಾರು 104 ಚಿಕ್ಕ ಆಸ್ಪತ್ರೆಗಳಿದ್ದು, ಈ ಆಸ್ಪತ್ರೆಗಳಲ್ಲಿ ಯಾವುದೇ ವ್ಯವಸ್ಥೆಗಳಿಲ್ಲದಿದ್ದರೂ, ಕೋವಿಡ್ ಚಿಕಿತ್ಸೆಗೆಂದು ಸೋಂಕಿತರನ್ನು ದಾಖಲಿಸಿಕೊಂಡು, ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದು, ರೋಗವು ಉಲ್ಬಣಗೊಂಡಲ್ಲಿ ಆಕ್ಷಿಜನ್, ವೆಂಟಿಲೇಟರ್, ರೆಮ್ಡಿಸಿವರ್ ಔಷಧಿಯ ಅವಶ್ಯಕತೆ ಬಂದಾಗ ಈ ಆಸ್ಪತ್ರೆಗಳಿಗೆ ಸರಬರಾಜು ಇಲ್ಲದ ಕಾರಣ, ಸೋಂಕಿತ ವ್ಯಕ್ತಿಗಳು ತೀವ್ರ ಅನಾರೋಗ್ಯ ಪೀಡಿತರಾಗಿ ಮರಣಹೊಂದುತ್ತಿರುವ ಪ್ರಕರಣಗಳೇ ಹೆಚ್ಚಾಗಿದ್ದು , ಈ ಕುರಿತಂತೆ ಡಿ.ಹೆಚ್.ಓ ರವರು ಈ ಕೂಡಲೇ ಸಂಬAಧಿಸಿದ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿ, ಕೋವಿಡ್ ಸೋಂಕಿನ ಚಿಕಿತ್ಸೆಯನ್ನು ನೀಡದಂತೆ ಸೂಚಿಸಬೇಕು. ಇಲ್ಲವಾದಲ್ಲಿ ಈ ಆಸ್ಪತ್ರೆಗಳನ್ನು ಎಂಪಾನೆಲ್ ಮಾಡಿಕೊಂಡು, ಆಕ್ಷಿಜನ್, ರೆಮ್ಡಿಸಿವಿರ್ ಔಷಧಿಯನ್ನು ಸರಬರಾಜು ಮಾಡಲು ಒಂದು ವಾರದೊಳಗಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಸ್ತುತ ದಿನಾಂಕದAದು ಸೋಂಕಿತರ ವಿವರ, ಹೋಂ ಐಸೋಲೇಷನ್ ನಲ್ಲಿರುವವರ ವಿವರ, ಆಸ್ಪತ್ರೆಗೆ ದಾಖಲಾದವರ ವಿವರ, ತುರ್ತು ನಿಗಾ ಘಟಕದಲ್ಲಿರುವವರ ವಿವರಗಳನ್ನು ಪಡೆದರು ಅದರಂತೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2041 ಜನ ಸೋಂಕಿತರಿದ್ದು, 1011 ಜನ ಹೋಂ ಐಸೋಲೇಷನ್ ನಲ್ಲಿ, 923 ಜನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪಂಚಕರ್ಮ ಆಯುರ್ವೇದ ಆಸ್ಪತ್ರೆಯಲ್ಲಿ ಕೋವಿಡ್ ಮಿತ್ರ ಪ್ರಾರಂಭಿಸಲಾಗಿದೆ, ಇದರಲ್ಲಿ ಶಂಕಿತರನ್ನು ಪರೀಕ್ಷೆಗೊಳಪಡಿಸಿ ಅವರ ದೈಹಿಕ ಸಾಮರ್ಥ್ಯಕ್ಕೆ ಅನುಸಾರವಾಗಿ ಚಿಕಿತ್ಸಾ ಸಲಹೆ ನೀಡುವುದು, ಅಗತ್ಯ ಆಸ್ಪತ್ರೆಗಳಿಗೆ ಕಳಿಸುವ ವ್ಯವಸ್ಥೆ ಮಾಡುತ್ತಿರುವುದಾಗಿ ಮಾಹಿತಿ ಪಡೆದರು, ಈ ವರೆಗೆ ಒಟ್ಟಾರೆ ಚಾಮರಾಜ ಕ್ಷೇತ್ರದಲ್ಲಿ ಸುಮಾರು 23 ಜನ ಕೋವಿಡ್ ನಿಂದಾಗಿ ಮರಣ ಹೊಂದಿದ್ದು, 89903 ಜನರಿಗೆ ಲಸಿಕೆ ಹಾಕಿರುವ ಮಾಹಿತಿ ಪಡೆದರು,
ಮೈಸೂರು ಮೆಡಿಕಲ್ ಕಾಲೇಜು ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವ್ಯಾಸಂಗ್ ಮಾಡುತ್ತಿರುವ ಸ್ನಾತಕೋತ್ತರ ವಿಧ್ಯಾರ್ಥಿಗಳಲ್ಲಿ, ಕೆಲವೇ ವಿಭಾಗದ ವಿದ್ಯಾರ್ಥಿಗಳನ್ನು ಮಾತ್ರ, ಟ್ರಾಮಾ ಸೆಂಟರ್‌ಗೆ ಸುಮಾರು 21 ದಿವಸಗಳ ರೆಡ್ ಏರಿಯಾ ವಾರ್ಡ್ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು, ಇದರಿಂದಾಗಿ ತೀವ್ರ ದೈಹಿಕ ಒತ್ತಡ ಅನುಭವಿಸುತ್ತಿರುವ ಇವರು, ವ್ಯಾಸಂಗ ಮಾಡಲು ಅವಕಾಶವಿಲ್ಲದೇ ತೊಂದರೆ ಅನುಭವಿಸುವತ್ತಿದ್ದಾರೆ. ಇನ್ನುಳಿದ ಹಲವಾರು ವಿಭಾಗದ ವಿಧ್ಯಾರ್ಥಿಗಳನ್ನು ಕೇವಲ ಸ್ವಾ÷್ಯಬ್ ಟೆಸ್ಟಿಂಗ್ ಎಂಟ್ರಿಗೆ ನಿಯೋಜಿಸಿದ್ದು, ಕೆಲವೇ ಸಂಖ್ಯೆಯ ವೈದ್ಯಕೀಯ ವಿಧ್ಯಾರ್ಥಿಗಳಿಂದ ಒತ್ತಡದ ಸೇವೆ ಪಡೆಯುವ ಬದಲಾಗಿ, ಎಲ್ಲಾ ವಿಭಾಗದ ವಿದ್ಯಾರ್ಥಿಗಳನ್ನೂ ಸಮನಾಗಿ ಕರ್ತವ್ಯಕ್ಕೆ ನಿಯೋಜನೆ ಮಾಡಿ ಮರು ಆದೇಶ ಹೊರಡಿಸುವಂತೆ ಎಂ.ಎA.ಸಿ ಡೀನ್‌ರಿಗೆ ಶಾಸಕರು ಸೂಚನೆ ನೀಡಿದರು.
ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಸೋಂಕು ಧೃಡಪಟ್ಟ ಎಲ್ಲಾ ರೋಗಿಗಳ ಮನೆ,ಮನೆಗೆ ತೆರ, ಳಿ ಔಷಧೋಪಚಾರದ ಕಿಟ್ ಗಳನ್ನು ವಿತರಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಪ್ರತಿ ವಾರ್ಡ್ ಗೆ ರೂ.5 ಲಕ್ಷದಂತೆ ಕೋವಿಡ್ ನಿರ್ವಹಣೆ ಹತೋಟಿಗಾಗಿ ನೀಡಲಿರುವ ಅನುದಾನವನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಪ್ರತಿ ವಾರ್ಡ್ ಗಳಲ್ಲಿ ಅದರಲ್ಲೂ ಸ್ಲಂ ಪ್ರದೇಶಗಳಲ್ಲಿ ಕೂಡಲೇ ಸ್ಯಾನಿಟೈಜೇಷನ್, ಫಾಗಿಂಗ್ ಮಾಡಲು ಕ್ರಮಕೈಗೊಳ್ಳಬೇಕೆಂದು ಕೋರಿದರು.
ಪ್ರಸ್ತುತ ಯಾವುದೇ ಕೋವಿಡ್ ಸೋಂಕಿತ ರೋಗಿಯು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸಮಯದಲ್ಲಿ ಅಂತಹ ರೋಗಿಗೆ ಆಕ್ಷಿಜನ್ ವೆಂಟಿಲೇಟರ್ ಸಮಸ್ಯೆ ಎದುರಾದಲ್ಲಿ ರೋಗಿಯ ಸಂಬAಧಿಕರಿಗೆ ಸೌಲಭ್ಯವಿರುವ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿಕೊಳ್ಳಲು ಸೂಚನೆ ನೀಡುತ್ತಿದ್ದು, ಇದರಿಂದಾಗಿ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿರುವುದು ನನ್ನಗಮನಕ್ಕೆ ಬಂದಿದ್ದು, ಇನ್ನು ಮುಂದೆ ಯಾವುದೇ ಆಸ್ಪತ್ರೆಯ ವೈದ್ಯರು ರೋಗಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ವಾರ್ ರೂಂಗೆ ಮಾಹಿತಿ ನೀಡಿ ರೋಗಿಯನ್ನು ಅಗತ್ಯ ಸೌಲಭ್ಯವಿರುವ ಕಡೆಗೆ ಸ್ಥಳಾಂತರಿಸಲು ಬೆಡ್ ಬ್ಲಾಕ್ ಮಾಡಿಸಿ ಸೂಕ್ತ ವ್ಯವಸ್ಥೆ ಮಾಡಲು ಕ್ರಮವಹಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ರುಕ್ಮಿಣಿ ಮಾದೇಗೌಡ, ಆಯುಕ್ತೆ ಶಿಲ್ಪಾನಾಗ್, ಡಿ.ಹೆಚ್.ಓ ಡಾ:ಅಮರನಾಥ್, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ. ನಂಜರಾಜ್, ವಲಯ ಆಯುಕ್ತರುಗಳು, ಅಭಿವೃದ್ದಿ ಅಧಿಕಾರಿಗಳು, ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ನಾಗರಾಜು, ಸಹಾಯಕ ಔಷಧಿ ನಿಯಂತ್ರಕರು, ಹಾಗೂ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲ ಸದಸ್ಯರುಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss