ಭೀಮಾತೀರದ ನಟೋರಿಯಸ್ ಹಂತಕ ಮಡುಸ್ವಾಮಿ ಗಡಿಪಾರು

ಹೊಸದಿಗಂತ ವರದಿ ​ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ ಚಡಚಣ ಭಂಟ ರೌಡಿಶೀಟರ್ ನನ್ನು ಕಾರವಾರ ಜೈಲಿಗೆ ಗಡಿಪಾರು ಮಾಡಲಾಗಿದೆ. ಇಲ್ಲಿನ ಶಿವಶಕ್ತಿ ನಗರ ನಿವಾಸಿ ಮಡಿವಾಳಯ್ಯ ಹಿರೇಮಠ ಉರ್ಫ್ ಮಡುಸ್ವಾಮಿ ಈತನನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಕಾರವಾರ ಜೈಲ್‌ಗೆ ರವಾನೆ ಮಾಡಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಆದೇಶ ಹೊರಡಿಸಿದ್ದಾರೆ.