ಇದೀಗ ಶೇರ್‌ ಚಾಟ್‌ ಸರದಿ: 20 ಶೇಕಡಾ ಉದ್ಯೋಗಿಗಳಿಗೆ ಗೇಟ್‌ ಪಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಆರ್ಥಿಕ ಕುಸಿತದ ಭೀತಿಗಳು ದೊಡ್ಡ ದೊಡ್ಡ ಜಾಗತಿಕ ಕಂಪನಿಗಳನ್ನೆ ಕಾಡಿರುವಾಗ, ಸ್ಟಾರ್ಟಪ್‌ ಗಳು ಇದರಿಂದ ಹೊರತಾಗಿಲ್ಲ. ಆರ್ಥಿಕ ಕುಸಿತದ ಭಯದಿಂದ ಕಂಪನಿಗಳು ವೆಚ್ಚ ಕಡಿತಕ್ಕೆ ಮುಂದಾಗಿದ್ದು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಕಾರ್ಯದಕ್ಷತೆಯ ಕುರಿತು ಕಂಪನಿಗಳು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. ಈಗಾಗಲೇ ಅಮೇಜಾನ್‌, ಮೆಟಾ ಸೇರಿದಂತೆ ಹಲವಾರು ಕಂಪನಿಗಳು ಉದ್ಯೋಗಿಗಳನ್ನು ಹೊರಹಾಕಿದ್ದು ಸೀಮಿತ ಉದ್ಯೋಗಿಗಳೊಂದಿಗೆ ಕೆಲಸ ಮಾಡಲು ಯೋಚಿಸುತ್ತಿವೆ. ಇದೀಗ ಈ ಕಂಪನಿಗಳ ಸಾಲಿಗೆ ಭಾರತದ ಸ್ಟಾರ್ಟಪ್‌ ಯುನಿಕಾರ್ನ್‌ ಆಗಿರೋ ಶೇರ್‌ ಚಾಟ್‌ ಕೂಡ ಸೇರಿದೆ.

ಭಾರತದ ಯಶಸ್ವಿ ಸ್ಟಾರ್ಟಪ್‌ ಗಳಲ್ಲಿ ಒಂದಾಗಿರೋ ಶೇರ್‌ ಚಾಟ್‌ ಟೆಕ್‌ ದೈತ್ಯ ಗೂಗಲ್‌ ನಿಂದ ಬೆಂಬಲಿತವಾಗಿದ್ದು ಇದೀಗ ತನ್ನ ಒಟ್ಟೂ ಉದ್ಯೋಗಿಗಳಲ್ಲಿ 20ಶೇಕಡಾ ಉದ್ಯೋಗಿಗಳನ್ನು ಹೊರಹಾಕಲು ಯೋಜಿಸುತ್ತಿದೆ. ಆರ್ಥಿಕ ಕುಸಿತದ ಭೀತಿಯಿಂದ ವೆಚ್ಚಕಡಿತಗೊಳಿಸಲು ಹೂಡಿಕೆದಾರರಿಂದ ಒತ್ತಡವಿದ್ದು, ಅನಿವಾರ್ಯವಾಗಿ ಉದ್ಯೋಗಿಗಳನ್ನು ಹೊರಹಾಕುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶೇರ್‌ಚಾಟ್ ಮುಖ್ಯ ಕಾರ್ಯನಿರ್ವಾಹಕ ಅಂಕುಶ್ ಸಚ್‌ದೇವ ಆಂತರಿಕ ಸಂದೇಶದಲ್ಲಿ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಬೆಂಗಳೂರು ಮೂಲದ ವೀಡಿಯೋ ಕಂಟೆಂಟ್‌ ಸೃಷ್ಟಿಸುವ ಸಾಮಾಜಿಕ ಪ್ಲಾಟ್‌ಫಾರ್ಮ್‌ ಶೇರ್‌ ಚಾಟ್‌, 5 ಶತಕೋಟಿ ಡಾಲರ್‌ ಮೌಲ್ಯವನ್ನು ಹೊಂದಿದೆ. ಕಂಪನಿಯಲ್ಲಿ ಒಟ್ಟೂ 2,200 ಉದ್ಯೋಗಿಗಳು ಕೆಲಸ ಮಾಡುತ್ತಿದ್ದು ಇವರಲ್ಲಿ 20 ಶೇಕಡಾ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!