ಶಾಸಕರಾಯ್ತು, ಈಗ ಸಂಸದರ ಸರದಿ: ಬಂಡಾಯದ ಬೇಗುದಿಯಲ್ಲಿ ಶಿವಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶಿವಸೇನೆಯ 36 ಶಾಸಕರು ಬಂಡಾಯಗಾರ ಏಕನಾಥ್‌ ಶಿಂಧೆಯವರ ಪಾಳಯವನ್ನು ಸೇರಿರುವ ಬೆನ್ನಲ್ಲೇ ಇದೀಗ ಶಿವಸೇನೆಯ ಸಂಸದರೂ ಕೂಡ ಶಿಂಧೆಯ ಬೆಂಬಲಕ್ಕೆ ನಿಂತಿಕೊಳ್ಳುತ್ತಿದ್ದಾರೆ.

ಪ್ರಸ್ತುತ ಶಿವಸೇನೆ ಪಕ್ಷದಿಂದ ಲೋಕಸಭೆಗೆ ಚುನಾಯಿತರಾಗಿರುವ ಸಂಸದರ ಸಂಖ್ಯೆ 18. ಅವರಲ್ಲಿ ಕೆಲವು ಸಂಸದರು ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಥಾಣೆಯ ರಾಜನ್‌ ವಿಚಾರೆ, ಕಲ್ಯಾಣ್‌ ಸಂಸದರಾಗಿರುವ ಏಕನಾಥ್‌ ಶಿಂಧೆ ಪುತ್ರ ಶ್ರೀಕಾಂತ್‌ ಶಿಂಧೆ ಈಗಾಗಲೇ ಬಂಡಾಯಕ್ಕೆ ಬೆಂಬಲ ಸೂಚಿಸಿದ್ದಾರೆ. ಇವರೊಂದಿಗೆ ವಶಿಂನ ಭಾವನಾ ಗಾವ್ಲಿ, ರಾಮ್‌ಟೆಕ್‌ನ ಕೃಪಾಲ್‌ ತುಮಾನೆ, ಪಾಲ್ಘರ್‌ನ ರಾಜೇಂದ್ರ ಗಾವಿಟ್‌ ಶಿಂಧೆಯವರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇವರ ಸಂಖ್ಯೆಯೂ ಏರಿಕೆಯಾಗುತ್ತಿದೆ.

ಇನ್ನು ಬಂಡಾಯ ಪಾಳಯದ ಸಂಖ್ಯೆಯು 37ನ್ನು ದಾಟಲು ಶಿಂಧೆ ಕಾಯುತ್ತಿದ್ದು ಪಕ್ಷಾಂತರ ನಿಷೇಧಕಾಯ್ದೆ ಅನ್ವಯವಾಗದಂತೆ ತಡೆಯಲು ಈ ಸಂಖ್ಯೆ ಅನಿವಾರ್ಯವಾಗಿದೆ. ಈ ಸಂಖ್ಯೆ ತಲುಪಿದ ನಂತರ ಅವರೆಲ್ಲರ ಸಹಿಹಾಕಿ ತಮ್ಮ ಪ್ರಾಬಲ್ಯವನ್ನು ಪ್ರತಿಪಾದಿಸುವ ಪತ್ರವನ್ನು ಬಂಡಾಯ ಶಾಸಕರಗುಂಪು ರಾಜ್ಯಪಾಲರಿಗೆ ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ.

ಶಿವಸೇನೆಯ ನಿಜವಾದ ಮುಖ್ಯ ಸಚೇತಕ ಸುನಿಲ್ ಪ್ರಭು ಅವರನ್ನು ಧಿಕ್ಕರಿಸಿ ಶಿಂಧೆ ಬಣ ಈಗಾಗಲೇ ಭರತ್ ಗೊಗವಾಲೆ ಅವರನ್ನು ಮುಖ್ಯ ಸಚೇತಕರನ್ನಾಗಿ ನಾಮನಿರ್ದೇಶನ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!