`ವೆರೈಟಿ’ ನಿಯತಕಾಲಿಕೆ ವರದಿಗಾರನ ಹುಟ್ಟುಹಬ್ಬಕ್ಕೆ ಅಚ್ಚರಿ ಉಡುಗೊರೆ ನೀಡಿದ ಎನ್‌ಟಿಆರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ವಿಶ್ವಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಅದರಲ್ಲಿ ನಟಿಸಿದ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಗೋಲ್ಡನ್ ಗ್ಲೋಬ್ ಅವಾರ್ಡ್ ಸಮಾರಂಭದಲ್ಲಿ ಭಾಗವಹಿಸಲು ಅಮೆರಿಕ ತಲುಪಿತ್ತು. ಇವರೊಂದಿಗೆ ಪ್ರಸಿದ್ಧ ಇಂಗ್ಲಿಷ್ ನಿಯತಕಾಲಿಕೆಗಳೂ ಅಲ್ಲಿಗೆ ತಲುಪಿದ್ದವು.

ಈ ಸಂದರ್ಭದಲ್ಲಿ ಪ್ರಸಿದ್ಧ ‘ವೆರೈಟಿ’ ನಿಯತಕಾಲಿಕದ ವರದಿಗಾರ ಮಾರ್ಕ್ ಮಲ್ಕಿನ್ ಅವರು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳಲ್ಲಿ ರೆಡ್ ಕಾರ್ಪೆಟ್‌ನಲ್ಲಿ ಭಾಗವಹಿಸಿದ್ದರು. ಈ ಮಾರ್ಕ್ ಆಗ ಅಲ್ಲಿದ್ದ ಜೂನಿಯರ್ ಎನ್ ಟಿಆರ್ ಅವರನ್ನು ಸಂದರ್ಶಿಸಿದ್ದಾರೆ. ಆದರೆ ಅಂದು (ಜನವರಿ 11) ತಾರಕ್ ಮಾರ್ಕ್ ಮಲ್ಕಿನ್ ಅವರ ಹುಟ್ಟುಹಬ್ಬ ಎಂದು ತಿಳಿದು ಸಂದರ್ಶನದ ಕೊನೆಯಲ್ಲಿ ಉಡುಗೊರೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಮಾರ್ಕ್ ತಮ್ಮ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದು.. ‘ಆರ್ ಆರ್ ಆರ್ ನಲ್ಲಿ ನಟಿಸಿದ್ದ ಜೂನಿಯರ್ ಎನ್ ಟಿಆರ್ ನನಗೆ ‘ಬೌ ಟೈ’ ಗಿಫ್ಟ್ ನೀಡಿದ್ದಾರೆ. ಧನ್ಯವಾದಗಳು ಎನ್ ಟಿಆರ್’ ಎಂದು ಪೋಸ್ಟ್ ಮಾಡಿದ್ದಾರೆ.

ಈ ವೆರೈಟಿ ಮ್ಯಾಗಜೀನ್ ಆಸ್ಕರ್ ಭವಿಷ್ಯ ಪಟ್ಟಿಯಲ್ಲಿ ಎನ್ ಟಿಆರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುವ ಸಾಧ್ಯತೆ ಇದೆ ಎಂದು ಪ್ರಕಟಿಸಿದೆ. ಈ ಚಿತ್ರವು ಈಗಾಗಲೇ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ‘ನಾಟು ನಾಟು’ ಹಾಡಿನ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರಸ್ತುತ, ಆರ್‌ಆರ್‌ಆರ್ ಅರ್ಹತೆಯ ಪಟ್ಟಿಯಲ್ಲಿ ಅತ್ಯುತ್ತಮ ಚಲನಚಿತ್ರವಾಗಿ ರೇಸ್‌ನಲ್ಲಿದೆ. ಜನವರಿ 12 ರಿಂದ 17 ರವರೆಗೆ ವರೆಗೆ ಈ ಅರ್ಹರ ಪಟ್ಟಿಗೆ ಮತದಾನ ನಡೆಯಲಿದೆ ಹೆಚ್ಚು ಮತ ಪಡೆದ ಚಿತ್ರಗಳು ಆಸ್ಕರ್ ನಾಮನಿರ್ದೇಶನದಲ್ಲಿ ನಿಲ್ಲುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!