ಓಟ್ಸ್ನಲ್ಲಿ ಹೆಚ್ಚಿನ ಅಂಶ ಫೈಬರ್ ಇದೆ. ಇದು ತೂಕ ಇಳಿಕೆಗೆ ಸಹಕಾರಿ ಜೊತೆಗೆ ಮಲಬದ್ಧತೆ ಸಮಸ್ಯೆಯಿಂದ ದೂರ ಇರುವಂತೆ ನೋಡಿಕೊಳ್ಳುತ್ತದೆ. ಹಾಗೆ ದಿನಕ್ಕೊಂದು ಮೊಟ್ಟೆ ತಿನ್ನಿ. ಅದು ಕೂಡ ಪ್ರೋಟೀನ್ನಲ್ಲಿ ಹೇರಳವಾಗಿದೆ. ಹೇಗೆ ಮಾಡೋದು ಈ ಸಿಂಪಲ್ ರೆಸಿಪಿ ನೋಡಿ..
ಬೇಕಾಗಿರುವ ಸಾಮಾಗ್ರಿಗಳು
ಓಟ್ಸ್
ಮೊಟ್ಟೆ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಓಂ ಕಾಳು
ಮಾಡುವ ವಿಧಾನ
ಮೊದಲು ಓಟ್ಸ್ಗೆ ಸ್ವಲ್ಪ ನೀರು ಹಾಕಿ ಅರ್ಧ ಗಂಟೆ ನೆನಸಿ
ನಂತರ ಅದಕ್ಕೆ ಮೊಟ್ಟೆ, ಈರುಳ್ಳಿ, ಉಪ್ಪು, ಓಂ ಕಾಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಸಿಮೆಣಸು ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ.
ಆಮ್ಲೆಟ್ ರೀತಿ ಹಂಚಿಗೆ ಸ್ವಲ್ಪ ಎಣ್ಣೆ ಹಾಕಿ ಈ ಮಿಶ್ರಣ ಸುರಿಯಿರಿ.
ಇದೀಗ ಓಟ್ಸ್ ಆಮ್ಲೆಟ್ ರೆಡಿ