Sunday, June 4, 2023

Latest Posts

HEALTH| ಬೊಜ್ಜಿನ ಸಮಸ್ಯೆಯೇ…ಹೀಗೆ ಮಾಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಬೊಜ್ಜು ಸಾಮಾನ್ಯ ಸಮಸ್ಯೆ. ಬೊಜ್ಜು ನಿವಾರಣೆ ನಾನಾ ಕಸರತ್ತು ಮಾಡುತ್ತಿದ್ದಾರೆ ಇಂದಿನ ಜನತೆ. ಅನಿಯಮಿತ ನಿದ್ರೆ, ಆಹಾರ ಚರ್ಯೆ, ಜೀವನ ಶೈಲಿ ಈ ಬೊಜ್ಜಿನ ಸಮಸ್ಯೆಗೆ ಮೂಲ ಕಾರಣ. ದೇಹದ ತೂಕ ಇಳಿಸಿಕೊಳ್ಳಲು ನಾನಾ ಪ್ರಯತ್ನ ಮಾಡುವುದು ಸಾಮಾನ್ಯವಾಗಿದೆ. ಇದನ್ನು ಸರಿಪಡಿಸಲು , ಸುಂದರ ಕಾಯ ಪಡೆಯಲು ಈ ಸರಳ ಸೂತ್ರ ಅಳವಡಿಸಿಕೊಳ್ಳಿ.

ಮುಖ್ಯವಾಗಿ ನಿಮ್ಮ ಆಹಾರದ ಕ್ರಮವನ್ನು ಬದಲಾವಣೆ ಮಾಡಬೇಕಾಗುತ್ತದೆ. ಆಹಾರದಲ್ಲಿ ಸಾಕಷ್ಟು ನಾರಿನಾಂಶದ ಆಹಾರದ ಜೊತೆಗೆ ಹಣ್ಣುಗಳನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯ ತಜ್ಞರ ಪ್ರಕಾರ ಪಪ್ಪಾಯಿ ಹಣ್ಣು ಅತೀ ಮುಖ್ಯವಾಗಿ ಸೇವಿಸಬೇಕಾದ ವಸ್ತುವಾಗಿದೆ. ಪಪ್ಪಾಯಿ ಹಣ್ಣಿನಲ್ಲಿ ಹೇರಳವಾದ ಪೋಷಕಾಂಶಗಳಿವೆ. ಇದರಿಂದಾಗಿ ಅನಾರೋಗ್ಯ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗುತ್ತದೆ. ಕೊಲೆಸ್ಟ್ರಾಲ್‌ ಅಂಶವನ್ನು ನಿಯಂತ್ರಿಸುವಲ್ಲಿ ಪಪ್ಪಾಯ ಪ್ರಮುಖ ಪಾತ್ರ ವಹಿಸುತ್ತದೆ. ತನ್ಮೂಲಕ ದೇಹದ ತೂಕ ಕಡಿಮೆಮಾಡಲು ಸಹಾಯ ನೀಡುತ್ತದೆ.

ತೂಕ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಬೆಳಗ್ಗಿನ ಉಪಾಹಾರಕ್ಕಾಗಿ ಪಪ್ಪಾಯ ಬಳಸುವುದು ಸೂಕ್ತ. ಪಪ್ಪಾಯ ಸಲಾಡ್‌ ಆರೋಗ್ಯ ವರ್ದನೆಗೆ ಸಹಕಾರಿಯಾಗುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಲೆಟಿಸ್‌, ಟೊಮೆಟೋ, ಉಪ್ಪು, ಬೆಳ್ಳುಳ್ಳಿ ಮತ್ತು ನಿಂಬೆ ರಸದೊಂದಿಗೆ ಬೆರೆಸಿದ ಸಲಾಡ್‌ ಸೇವನೆ ಉತ್ತಮ. ಪಪ್ಪಾಯಿಯ ಜ್ಯೂಸ್‌ ನಿಯಮಿತವಾಗಿ ಸೇವಿಸುವುದು ಕೂಡಾ ತೂಕ ಇಳಿಕೆಗೆ ಸಹಕಾರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!