ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆ ಇಂದು ಪ್ರಧಾನಮಂತ್ರಿ ಮೋದಿಗೆ ಪತ್ರ ಬರೆದಿರುವ ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೊರೋನಾ ವ್ಯಾಕ್ಸಿನ್ ತೆರೆದ ಮಾರುಕಟ್ಟೆಯಲ್ಲಿ ಸಿಗುವಂತಾದರೆ ಕೊಳ್ಳಬಯಸುವವರು ವ್ಯಾಕ್ಸಿನ್ ಪಡೆಯಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಕೊರೋನಾ ವ್ಯಾಕ್ಸಿನ್ ಸರ್ಕಾರದ ಹಿಡಿತದಿಂದಾಚೆಗೂ ತೆರೆದ ಮಾರುಕಟ್ಟೆಯಲ್ಲಿ ಲಭ್ಯವಾಗುವಂತಾಗಬೇಕು. ಹೀಗಾದಲ್ಲಿ ವ್ಯಾಕ್ಸಿನ್ ಕೊಂಡುಕೊಳ್ಳಲು ಶಕ್ತವಾದವರು ವ್ಯಾಕ್ಸಿನ್ನ್ನು ಖರೀದಿಸಿ ಪಡೆದುಕೊಳ್ಳುತ್ತಾರೆ. ಇದರಿಂದ ಸರ್ಕಾರ ಅತಿಹೆಚ್ಚು ಬಳಲಿದ ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸಬಹುದು.
ವಿದೇಶಗಳಲ್ಲಿ ಅನುಮತಿ ಪಡೆದ ವ್ಯಾಕ್ಸಿನ್ಗಳಿಗೆ ದೇಶದಲ್ಲೂ ಅನುಮತಿ ನೀಡಬೇಕು. ಇದರಿಂದ ವ್ಯಾಕ್ಸಿನ್ ಹಂಚಿಕೆ ವೇಗ ಪಡೆದುಕೊಳ್ಳುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವ್ಯಾಕ್ಸಿನ್ ತಯಾರಿಸುವ ಯೂನಿಟ್ಗಳಿಗೆ ಸಾಧ್ಯವಾದಷ್ಟೂ ಬೆಂಬಲ ನೀಡಬೇಕು.
ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಕೇಂದ್ರ ಸರ್ಕಾರ ಆದ್ಯತೆ ಮೇರೆಗೆ ವ್ಯಾಕ್ಸಿನ್ ಪೂರೈಸಬೇಕು. ಇದರ ಜೊತೆಗೆ ವಯಸ್ಸಿನ ಅಂತರವನ್ನೂ ಮಾರ್ಪಡಿಸಬೇಕು. ಮೆಟ್ರೋಪಾಲಿಟನ್ ಸಿಟಿಗಳು ದೇಶದ ಆರ್ಥಿಕತೆಯ ಕೇಂದ್ರ ಬಿಂದುಗಳು.. ಇಂಥ ನಗರಗಳಲ್ಲಿ ಲಾಕ್ಡೌನ್ ಆದಲ್ಲಿ ಇಡೀ ದೇಶಕ್ಕೆ ತೊಂದರೆ ತಪ್ಪಿದ್ದಲ್ಲ ಎಂದು ಹೇಳಿದರು.