ಪುರಾಣ ಪ್ರಸಿದ್ಧ ಕ್ಷೇತ್ರ ಪುರಿ ಜಗನ್ನಾಥ ದೇಗುಲಕ್ಕೆ ನುಗ್ಗಿ 43 ಒಲೆಗಳ ಧ್ವಂಸ; ಆರೋಪಿ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಒರಿಸ್ಸಾದ ಪುರಾಣಪ್ರಸಿದ್ದ ಪುರಿ ಜಗನ್ನಾಥ ದೇವಾಲಯದ ಅಡುಗೆ ಕೋಣೆಯಲ್ಲಿ ಮಣ್ಣಿನ ಒಲೆಗಳನ್ನು ಧ್ವಂಸ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಖೋರ್ಧಾ ಜಿಲ್ಲೆಯ ಬೆಗುನಿಯಾ ಗ್ರಾಮದ ಜೈ ಮೊಹಪಾತ್ರ(30 ವರ್ಷ) ಎಂದು ಗುರುತಿಸಲಾಗಿದೆ. ಪುರಿ ಪೊಲೀಸರ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಿತ್ತು.
ದೇಶದಲ್ಲೇ ದೊಡ್ಡ ದೇವಾಲಯಗಳಲ್ಲೊಂದಾಗಿರುವ ಪುರಿ ದೇವಸ್ಥಾನದ ಅಡುಗೆಮನೆಯಲ್ಲಿ ಒಟ್ಟು 240 ಮಣ್ಣಿನ ಒಲೆಗಳಿವೆ. ದೇವರಿಗೆ ಮತ್ತು ಭಕ್ತರಿಗೆ ಅರ್ಪಿಸುವ ‘ಮಹಾಪ್ರಸಾದ’ವನ್ನು ತಯಾರಿಸಲು ಒಲೆಗಳನ್ನು ಬಳಸಲಾಗುತ್ತದೆ. ಶನಿವಾರ ರಾತ್ರಿ ದೇಗುಲದೊಳಗೆ ನುಗ್ಗಿದ್ದ ಆರೋಪಿ 43 ಒಲೆಗಳನ್ನು ಧ್ವಂಸಗೈದಿದ್ದ.
ಆರೋಪಿಯ ಮೇಲೆ ಐಪಿಸಿ ಸೆಕ್ಷನ್ 427 ಮತ್ತು 295A (ಧಾರ್ಮಿಕ ಭಾವನೆಗಳಿಗೆ ಧಕ್ಕೆ) ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಯ ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!