ಒಡಿಶಾ ರೈಲು ದುರಂತ। ರಕ್ಷಣಾ ಕಾರ್ಯಾಚರಣೆ ಪೂರ್ಣ: ಬೇಸ್ ಕ್ಯಾಂಪ್ ನತ್ತ NDRF ತಂಡಗಳು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

275 ಮಂದಿಯ ಸಾವಿಗೆ ಕಾರಣವಾದ ಒಡಿಶಾ ರೈಲು ದುರಂತದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಹಿನ್ನಲೆಯಲ್ಲಿ ಘಟನಾ ಪ್ರದೇಶದಲ್ಲಿದ್ದ ಎಲ್ಲಾ 9 NDRF ತಂಡಗಳು ತಮ್ಮ ತಮ್ಮ ಬೇಸ್ ಕ್ಯಾಂಪ್ ಗೆ ಮರಳಲಿವೆ.

ರೈಲು ಅಪಘಾತ ಸ್ಥಳದಲ್ಲಿದ್ದ ಎಲ್ಲಾ 9 NDRF ತಂಡಗಳನ್ನು ಹಿಂಪಡೆಯಲಾಗಿದ್ದು, ಎಲ್ಲ ಸಿಬ್ಬಂದಿಗಳು ಇದೀಗ ತಮ್ಮ ಬೇಸ್ ಕ್ಯಾಂಪ್ ಗೆ ಮರಳಲಿದ್ದಾರೆ. ತ್ರಿವಳಿ ರೈಲು ಅಪಘಾತದ ನಂತರ ಒಡಿಶಾದ ಬಾಲಸೋರ್ನಲ್ಲಿ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ NDRF ಎಲ್ಲಾ ಒಂಬತ್ತು ತಂಡಗಳನ್ನು ಹಿಂತೆಗೆದುಕೊಳ್ಳುವುದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ಇನ್ಸ್ಪೆಕ್ಟರ್ ಜನರಲ್ ನರೇಂದ್ರ ಸಿಂಗ್ ಬುಂದೇಲಾ ಸೋಮವಾರ ಘೋಷಿಸಿದ್ದಾರೆ.

“ಮುಖ್ಯ ಮಾರ್ಗಗಳಲ್ಲಿ ರೈಲು ಸಂಚಾರವನ್ನು ಪುನಃಸ್ಥಾಪಿಸಲಾಗಿದೆ ಮತ್ತು ಪೂರ್ಣ ಕಾರ್ಯಾಚರಣೆಯ ನಂತರ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಒಡಿಶಾದ ಬಾಲಸೋರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ NDRF ನ ಎಲ್ಲಾ 9 ತಂಡಗಳನ್ನು ಹಿಂಪಡೆಯಲಾಗಿದೆ” ಎಂದು ನರೇಂದ್ರ ಸಿಂಗ್ ಬುಂದೇಲಾ ತಿಳಿಸಿದ್ದಾರೆ.

”ರೈಲು ಅಪಘಾತದಲ್ಲಿ ಮೂರು ರೈಲುಗಳ ಸಾಕಷ್ಟು ಕೋಚ್ ಗಳು ನೆಲಕ್ಕುರುಳಿದ್ದರಿಂದ ತಮ್ಮ ಈ ಕಾರ್ಯಾಚರಣೆ ಸಾಕಷ್ಟು ಸವಾಲಿನಿಂದ ಕೂಡಿತ್ತು. ರೈಲುಗಳು ಅಪಘಾತಕ್ಕೀಡಾದ ರೀತಿಯಲ್ಲಿ, ಕೋಚ್ಗಳು ಹಳಿತಪ್ಪಿದವು ಮತ್ತು ಪಲ್ಟಿಯಾಗಿದ್ದವು. ನಾವು ಈ ಕೋಚ್ಗಳ ಒಳಗೆ ಪ್ರವೇಶಿಸಬೇಕಾಯಿತು, ಒಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಬೇಕು ಮತ್ತು ಗಾಯಗೊಂಡವರಿಗೆ ವೈದ್ಯಕೀಯ ನೆರವು ನೀಡಬೇಕಾಯಿತು ಎಂದು ಹೇಳಿದ್ದಾರೆ.

275 ಜನರ ಪ್ರಾಣಹಾನಿ ಮತ್ತು 1000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಒಡಿಶಾದ ದುರಂತ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!