Saturday, August 13, 2022

Latest Posts

ಅಂಬಾನಿ ನಿವಾಸದ ಬಳಿ ಸ್ಫೋಟಕ ವಸ್ತು ಪತ್ತೆ ಪ್ರಕರಣ: ವಿಧಿವಿಜ್ಞಾನ ಪರೀಕ್ಷೆಗೆ ಕಾರು, ಜಿಲೆಟಿನ್‌ ಕಡ್ಡಿಗಳ ರವಾನೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಉದ್ಯಮಿ ಮುಕೇಶ್‌ ಅಂಬಾನಿ ಅವರ ನಿವಾಸದ ಬಳಿ ಇತ್ತೀಚೆಗೆ ಪತ್ತೆಯಾಗಿದ್ದ ಎಸ್‌ಯುವಿ ಮತ್ತು ಅದರಲ್ಲಿದ್ದ ಜಿಲೆಟಿನ್‌ ಕಡ್ಡಿಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಕಳುಹಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಕಲಿನಾದಲ್ಲಿ ಇರುವ ಫೊರೆನ್ಸಿಕ್‌ ಸೈನ್ಸ್‌ ಲ್ಯಾಬ್‌ಗೆ (ಎಫ್‌ಎಸ್‌ಎಲ್‌) ಅವುಗಳನ್ನು ಕಳುಹಿಸಲಾಗಿದೆ. ಇನ್ನು ಕಾರಿನಲ್ಲಿ ಯಾವುದಾದರೂ ರಕ್ತದ ಕಲೆ, ಕೂದಲು ಅಥವಾ ಕುರುಹು ಪತ್ತೆಯಾದರೆ, ಈ ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಕಡ್ಡಿಗಳಲ್ಲಿನ ಜಿಲೆಟಿನ್‌ನ ಶೇಕಡಾವಾರು ಪ್ರಮಾಣವನ್ನು ಎಫ್‌ಎಸ್‌ಎಲ್‌ ಪತ್ತೆ ಮಾಡಲಿದೆ. ಜೊತೆಗೆ ವಾಹನದ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ಇದರಿಂದ ವಾಹನದ ನಿಜವಾದ ಮಾಲೀಕ ಯಾರು ಎಂಬುದು ಗೊತ್ತಾಗುತ್ತದೆ . ಇನ್ನು ಪ್ರಯೋಗಾಲಯವು ಈ ಕುರಿತು ವಾರದೊಳಗೆ ವರದಿ ನೀಡಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss