Thursday, August 11, 2022

Latest Posts

ಕೇಂದ್ರ ಸಂಪುಟ ಸಮಿತಿಗಳ ಪುನಾರಚನೆ: ಸ್ಮೃತಿ, ಭೂಪೇಂದರ್ , ಸಿಂಧಿಯಾಗೆ ಪ್ರಮುಖ ಸಮಿತಿಗಳಲ್ಲಿ ಸ್ಥಾನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸಂಸತ್ತಿನ ಮುಂಗಾರು ಅವೇಶನ ಸನ್ನಿಹಿತವಾಗಿದ್ದು, ಸರಕಾರವು ಸಂಸದೀಯ ವ್ಯವಹಾರಗಳು ಸೇರಿದಂತೆ ಹಲವು ಸಂಪುಟ ಸಮಿತಿಗಳನ್ನು ಪುನಾರಚಿಸಿದೆ. ಸ್ಮೃತಿ ಇರಾನಿ, ಭೂಪೇಂದರ್ ಯಾದವ್, ಸರ್ಬಾನಂದ ಸೋನಾವಾಲ್ ಅವರು ಪ್ರಧಾನಿ ಮೋದಿಯವರ ನೇತೃತ್ವದ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಹಾಗೆಯೇ ಹೂಡಿಕೆ ಮತ್ತು ಬೆಳವಣಿಗೆ ಮೇಲಿನ ಸಂಪುಟ ಸಮಿತಿಯಲ್ಲಿ ಅಶ್ವಿನಿ ವೈಷ್ಣವ್, ನಾರಾಯಣ ರಾಣೆ, ಜ್ಯೋತಿರಾದಿತ್ಯ ಸಿಂಧಿಯಾ ಸ್ಥಾನ ಪಡೆದಿದ್ದಾರೆ. ಸಂಸದೀಯ ವ್ಯವಹಾರಗಳ ಸಮಿತಿಯಲ್ಲಿ ವೀರೇಂದ್ರ ಕುಮಾರ್, ಕಿರಣ್ ರೆಜಿಜು, ಅನುರಾಗ್ ಠಾಕೂರ್ ಹೊಸ ಸದಸ್ಯರಾಗಿ ಸೇರ್ಪಡೆಗೊಂಡಿರುವುದಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಆದರೆ ಭದ್ರತೆ ಮತ್ತು ನೇಮಕಾತಿ ಕುರಿತ ಸಮಿತಿಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ
ಮೇಲಿನ ಸಮಿತಿಯನ್ನು ಕೂಡಾ ಪುನಾರಚಿಸಲಾಗಿದ್ದು, ಇದರಲ್ಲಿ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ , ಭೂಪೇಂದರ್ ಯಾದವ್, ಆರ್‌ಸಿಪಿ ಸಿಂಗ್, ಜಿ.ಕಿಷನ್ ರೆಡ್ಡಿ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಇತ್ತೀಚೆಗೆ ಕೇಂದ್ರ ಸಂಪುಟ ಪುನಾರಚನೆಯಾದ ಬಳಿಕ ಈಗ ಸಮಿತಿಗಳ ಪುನಾರಚನೆಯಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss