Wednesday, August 17, 2022

Latest Posts

ಹಿಂದುಗಳ ಮೇಲಿನ ಅತ್ಯಾಚಾರ ದೇವಸ್ಥಾನಗಳ ಧ್ವಂಸ ಪ್ರಕರಣ ಖಂಡಿಸಿ ಪ್ರತಿಭಟನೆ

ಹೊಸ ದಿಗಂತ ವರದಿ, ಮಳವಳ್ಳಿ:

ಬಾಂಗ್ಲಾದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಹಿಂದೂಗಳ ಮೇಲಿನ ಅತ್ಯಾಚಾರ ದೇವಸ್ಥಾನಗಳ ಧ್ವಂಸ ಪ್ರಕರಣಗಳನ್ನು ಖಂಡಿಸಿ ವಿಶ್ವ ಹಿಂದು ಪರಿಷತ್, ಆರೆಸ್ಸೆಸ್, ಬಜರಂಗದಳ, ಯುವಬ್ರಿಗೇಡ್, ಹಿಂದೂ ಜಾಗರಣ ವೇದಿಕೆಯ ಸದಸ್ಯರ ಪಂಜಿನ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಿದರು.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನರಮೇಧದ ಜೊತೆಗೆ ದೇವಸ್ಥಾನಗಳು ಧ್ವಂಸವಾಗುತ್ತಿವೆ ಎಂದು
ಚಿಕ್ಕಮಕ್ಕಳು, ಮಹಿಳೆಯರ ಮೇಲೆ ಅತ್ಯಾಚಾರ ಎಗ್ಗಿಲ್ಲದೆ ನಡೆಯುತ್ತಿದೆ ಹೀಗಿದ್ದರೂ ಅಲ್ಲಿನ ಸರಕಾರ ಹಿಂದೂಗಳ ನೆರವಿಗೆ ಧಾವಿಸಿಲ್ಲ ಇವೆಲ್ಲವೂ ವ್ಯಾಪಕವಾಗಿ ಹಿಂದೂ ವಿರೋಧಿ ನೀತಿಯ ಸಂಚಿನಿಂದ ಕೂಡಿದೆ ಎಂದು ಆರೋಪಿಸಿದರು.
ಭಾರತ ಸರ್ಕಾರ ಯಾವುದೇ ಕಾನೂನು ಜಾರಿಗೆ ತಂದರೂ ವಿದೇಶದಲ್ಲಿರುವ ಹಿಂದೂಗಳನ್ನು ನೆನಪಿಸಿಕೊಂಡು ಜಾರಿ ಮಾಡಬೇಕೆಂದು ಹೇಳಿರುವ ಬಾಂಗ್ಲಾ ದೇಶದ ಪ್ರಧಾನಿಯ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹಿಂದೂಗಳು ಒಗ್ಗಟ್ಟಾಗಿ ನಿಂತರೆ ತಲೆಬಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿಂದೂಗಳ ಮೇಲೆ ದೇಶದ ಒಳಗಡೆ ಅಲ್ಲದೇ ಹೊರಗಡೆಯೂ ಸಹ ನಿರಂತರವಾಗಿ ಕಿರುಕುಳ ವ್ಯಕ್ತವಾಗುತ್ತಿದ್ದು, ಭಾರತ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ವಿಶ್ವ ಹಿಂದು ಪರಿಷತ್ತಿನ ತಾಲ್ಲೂಕು ಕಾರ್ಯದರ್ಶಿ ಬಸವರಾಜು ಮಾತನಾಡಿ, ಗೋ ರಕ್ಷಣಾ ಕಾಯಿದೆ ಮತ್ತು ಮತಾಂತರ ನಿಷೇಧ ಕಾಯಿದೆ ಸಮರ್ಪಕವಾಗಿ ಜಾರಿಯಾಗಬೇಕೆಂದು ರ್ಕಾರವನ್ನು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಚಾಲಕ ಮಹೇಶ ಸೇರಿದಂತೆ ಅನೇಕ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!