ಭಾರತದ ರಾಷ್ಟ್ರಪತಿಗಳ ವೇತನ, ಸೌಲಭ್ಯ ಇತ್ಯಾದಿಗಾಗಿ ತಿಂಗಳಿಗಾಗುವ ವೆಚ್ಚ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ 15ನೇ ರಾಷ್ಟ್ರಪತಿ ಘೋಷಣೆಯಾದ ಈ ಸಂದರ್ಭದಲ್ಲಿ ಭಾರತದ ರಾಷ್ಟ್ರಪತಿ ಹುದ್ದೆಗಿರುವ ಸೌಲಭ್ಯಗಳೇನು? ಅವರು ಪಡೆಯುವ ವೇತನ ಎಷ್ಟು? ಎಂಬ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಭಾರತದಲ್ಲಿ ರಾಷ್ಟ್ರಪತಿಗೆ ಪ್ರತೀ ತಿಂಗಳು ನೀಡಲಾಗುವ ವೇತನ 5 ಲಕ್ಷ ರೂ.ಗಳು. ಈ ವೇತನಕ್ಕೆ ಅವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಇನ್ನು ಭತ್ಯೆಗಳ ವಿಚಾರಕ್ಕೆ ಬಂದರೆ ನವದೆಹಲಿಯಲ್ಲಿರುವ 2,00,000 ಚದರ ಅಡಿ ವಿಸ್ತೀರ್ಣದ ರಾಷ್ಟ್ರಪತಿ ಭವನವು ಅವರ ಅಧಿಕೃತ ನಿವಾಸವಾಗಿರುತ್ತದೆ. ಇದರಲ್ಲಿ 340 ಕೊಠಡಿಗಳಿವೆ. 200 ಮಂದಿ ಇಲ್ಲಿ ಉದ್ಯೋಗಿಗಳಿದ್ದಾರೆ. ಅಧ್ಯಕ್ಷರ ನಿವಾಸ, ಸಿಬ್ಬಂದಿ, ಅತಿಥಿಗಳ ಭೇಟಿ, ಆಹಾರ ಖರ್ಚು ಇತ್ಯಾದಿಗಳಿಗಾಗಿ ಸರ್ಕಾರ ವಾರ್ಷಿಕವಾಗಿ ಖರ್ಚು ಮಾಡುವ ಹಣ ಸುಮಾರು 22.5 ಮಿಲಿಯನ್.
ನಿವೃತ್ತಿ ಬಳಿಕ?
ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಅವರಿಗೆ ತಿಂಗಳಿಗೆ 1.5 ಲಕ್ಷ ಪಿಂಚಣಿ ನೀಡಲಾಗುತ್ತದೆ. ಇನ್ನು ಸಿಬ್ಬಂದಿಗೆ ಖರ್ಚು ಮಾಡಲು ಪ್ರತ್ಯೇಕವಾಗಿ ಮಾಸಿಕ 60 ಸಾವಿರ ರೂ., ಉಚಿತವಾಗಿ ಒಂದು ಬಂಗಲೆ, ಎರಡು ಉಚಿತ ಲ್ಯಾಂಡ್‌ಲೈನ್ ದೂರವಾಣಿ, ಮೊಬೈಲ್‌ಫೋನ್, ರೈಲು, ವಿಮಾನದಲ್ಲಿ ಸಂಗಾತಿಯೊಂದಿಗೆ ಉಚಿತ ಪ್ರಯಾಣ, ಉಚಿತ ವಾಹನ ಸೌಲಭ್ಯ ಹಾಗೂ ಭದ್ರತೆ ಮತ್ತು 2 ದೆಹಲಿ ಪೊಲೀಸ್ ಕಾರ್ಯದರ್ಶಿಗಳನ್ನು ಒದಗಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!