Wednesday, August 17, 2022

Latest Posts

ಕೆಂಜಾರಿನ ಕಪಿಲಾ ಗೋಶಾಲೆಯ ಗೋವುಗಳ ಸಂರಕ್ಷಿಸಲು ಸಂಘಟನೆ ಸಿದ್ದ: ಸುದರ್ಶನ ಮೂಡಬಿದಿರೆ

ಹೊಸ ದಿಗಂತ ವರದಿ, ಮಂಗಳೂರು:

ಗೋಸಂರಕ್ಷಣೆಗೆ ಬಿಜೆಪಿ ಬದ್ಧವಿದೆ. ಕೆಂಜಾರಿನ ಕಪಿಲಾ ಗೋಶಾಲೆಯ ಗೋವುಗಳನ್ನು ಸಂರಕ್ಷಿಸಲು ಸಂಘಟನೆ ಸಿದ್ದ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ತಿಳಿಸಿದರು.
ಗೋಶಾಲೆ ನಡೆಸಲು ಮಾನದಂಡವಿದೆ. ರಸ್ತೆಬದಿ ಗೋಶಾಲೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಕಪಿಲಾ ಗೋಶಾಲೆಯು ಸರಕಾರಿ ಜಾಗದಲ್ಲಿರುವುದರಿಂದ ಅದನ್ನು ತೆರವುಗೊಳಿಸಲಾಗಿದೆ. ಅಲ್ಲಿನ ಗೋವುಗಳನ್ನು ಸಾಕಲು ಗೋಶಾಲೆಯ ಮುಖ್ಯಸ್ಥರಿಗೆ ಸಾಧ್ಯವಿಲ್ಲ ಎಂದಾದರೆ ಅದನ್ನು ಸಂರಕ್ಷಿಸಲು ಸಂಘಟನೆ ಬದ್ಧವಾಗಿದೆ. ವಿಹಿಂಪ, ಬಜರಂಗದಳ ವತಿಯಿಂದ ಈಗಾಗಲೇ ಗೋವುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಕೆಂಜಾರಿನಲ್ಲಿ ತಮ್ಮ ಖಾಸಗಿ ಜಾಗದಲ್ಲಿ ಗೋ ಶಾಲೆ ನಿರ್ಮಿಸಲಾಗಿದೆ ಎಂದು ಕಪಿಲಾ ಗೋಶಾಲೆಯ ಮುಖ್ಯಸ್ಥರು ಹೇಳಿದ್ದರು. ಆದರೆ, ಅದು ಕೋಸ್ಟ್‌ಗಾರ್ಡ್‌ಗೆ ಮೀಸಲಿಟ್ಟ ಜಾಗವಾಗಿದೆ. ಖಾಸಗಿ ಜಾಗವನ್ನು ತೋರಿಸಲು ಅವರು ವಿಫಲರಾಗಿದ್ದಾರೆ. ಅವರ ಬಳಿ ನಾಲ್ಕು ಸೆಂಟ್ಸ್ ಜಾಗ ಮಾತ್ರ ಇದ್ದು, ಉಳಿದ ಜಾಗ ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರಕ್ಕಾಗಿ ಮೀಸಲಿಟ್ಟ ಸರಕಾರಿ ಜಾಗ. ಈ ಹಿಂದೆ ಅದು ಕಪಿಲಾ ಗೋಶಾಲೆಯ ಖಾಸಗಿ ಜಾಗವೆಂದು ತಿಳಿದು ಶಾಸಕರು, ಹಿಂದಿನ ಹಿಂದಿನ ಮೇಯರ್ ಸಹಾಯಧನ ನೀಡಿದ್ದಾರೆ. ಆದರೆ ಇದೀಗ ಅದು ಸರಕಾರಿ ಜಾಗವೆಂದು ತಿಳಿದ ಮೇಲೆ ಜಿಲ್ಲಾಡಳಿತದಿಂದ ಕಳೆದ ಆರು ತಿಂಗಳಿನಿಂದ ನೋಟಿಸ್ ನೀಡಿ ಖಾಲಿ ಮಾಡಲು ತಿಳಿಸಲಾಗಿತ್ತು. ಹಾಗಿದ್ದರೂ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!