Monday, July 4, 2022

Latest Posts

ಜಾನುವಾರುಗಳ ಕಳ್ಳ ಸಾಗಾಟ: ಆರೋಪಿಗಳ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಕುಮಟಾ :

ತಾಲೂಕಿನ ಹೊಳೆಗದ್ದೆ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗೋವುಗಳನ್ನ ಕಳ್ಳ ಸಾಗಾಟ ಮಾಡುತ್ತಿರುವಾಗ ಸಿ. ಪಿ. ಐ ಶಿವ ಪ್ರಕಾಶ್.ಪಿ ಎಸ್ ಐ ಆನಂದ ಮೂರ್ತಿ, ಕ್ರೈಮ್ ಪಿ ಎಸ್ ಐ ರವಿಗಿದ್ದಿ ತಂಡವು ಲಾರಿಯನ್ನು ತಡೆದು ಪರಿಶೀಲಿದಾಗ ಪ್ರಕರಣ ಬೆಳಕಿಗೆ ಬಂದಿದೆ. 14 ಜರ್ಸಿ ತಳಿಯ ಜಾನುವಾರುಗಳನ್ನು ಕಳ್ಳ ಸಾಗಾಟ ಮಾಡುತ್ತಿದ್ದರು. ಆರೋಪಿಗಳಾದ ಪಂಜಾಬ್ ರಾಜ್ಯದ ಸಾಹೇಬ್, ಪಾತೇಗರ್, ಅನಿಲ್ ಕುಮಾರ ಚಾರಂಜಿತ್, ಮತ್ತು ಜಗದೀಪ್ ಸಿಂಗ್ ಅವರನ್ನು ಬಂಧಿಸಿ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಕುಮಟಾ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss