Tuesday, July 5, 2022

Latest Posts

ಮಂಗಳೂರಿನ ದಕ್ಕೆಗೆ ಬಂತು ‘ಕೊರೋನಾ’ ಮೀನು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………….

ಹೊಸ ದಿಗಂತ ವರದಿ, ಮಂಗಳೂರು:

ಮಂಗಳೂರಿನ ಧಕ್ಕೆಗೆ ಕೊರೋನಾ ಮೀನು ಬಂದಿದೆ!
ಅರೆ, ಇದ್ಯಾವ ಮೀನು ಅಂದುಕೊಂಡಿರಾ? ಕೋವಿಡ್ ವೈರಸ್ ಮಾದರಿಯಲ್ಲಿ ಈ ಮೀನು ಇದೆ. ಮೈತುಂಬಾ ಮುಳ್ಳಿನಂತಹ ಪದರವಿರುವ ಈ ಮೀನನ್ನು ಮೀನುಗಾರರು `ಕೊರೋನಾ ಮೀನು’ ಎನ್ನುತ್ತಿದ್ದಾರೆ.
ಧಕ್ಕೆಗೆ ಕೊರೋನಾ ಬಂದಿರುವುದಾಗಿ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕರಾವಳಿ ಪ್ರದೇಶದಲ್ಲಿ ಇದುವರೆಗೂ ಈ ರೀತಿಯ ಮೀನು ಬಂದಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ಮೀನುಗಾರರು. ಈ ಮೀನು ನೋಡಲು ಕೊರೋನಾ ಮಹಾಮಾರಿ ವೈರಸ್ ರೀತಿಯಲ್ಲಿ ಇರುವುದರಿಂದ ಇದನ್ನು `ಕೊರೋನಾ ಮೀನು’ ಎಂದು ಸ್ಥಳೀಯ ಮೀನುಗಾರರು, ವ್ಯಾಪಾರಸ್ಥರು ಕರೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss