ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ವರದಿ, ಮೈಸೂರು:
ಮಹಾಮಾರಿ ಕೊರೋನಾ ಎರಡನೇ ಅಲೆಯ ವೇಳೆ ಹೋಂ ಐಸೋಲೇಶನ್ನಲ್ಲಿದ್ದು, ಕೃತಕ ಉಸಿರಾಟದ ಅವಶ್ಯಕತೆ ಇರುವ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳ ಉಚಿತ ಪೂರೈಕೆಗೆ ಯಶ್ ಟೆಲ್ ಸಂಸ್ಥೆ ಮುಂದಾಗಿದೆ.
ವೀ ಕೇರ್ ಮೈಸೂರು ಎಂಬ ಹೆಸರಿನಡಿ ಕೇರ್ ಸೋಷಿಯಲ್ ಫೌಂಡೇಶನ್ ಜೊತೆಗೂಡಿ ಕೊರೋನಾ ರೋಗಿಗಳ ಮನೆಗೆ ಉಚಿತವಾಗಿ ಆಕ್ಸಿಜನ್ ಪೂರೈಸಲು ಮುಂದಾಗಿದೆ. ಆಕ್ಸಿಜನ್ ಅಗತ್ಯವಿರುವ ರೋಗಿಗಳು 9845759434, 9008720156, 9620984019 , 9945392317, 9845704515 ಸಂಖ್ಯೆಗೆ ಕರೆ ಮಾಡಿ ಸೌಲಭ್ಯವನ್ನು ಪಡೆಯಬಹುದಾಗಿದೆ.
ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಯಶ್ಟೆಲ್ ಕಚೇರಿಯ ಮುಂಭಾಗ ಉಚಿತ ಕಾನ್ಸನ್ ಟ್ರೇಟರ್ ಸೇವಾ ಸೌಲಭ್ಯಕ್ಕೆ ಶಾಸಕ ಎಲ್. ನಾಗೇಂದ್ರ ಹಾಗೂ ಡಿಸಿಪಿ ಡಾ. ಎ.ಎನ್ ಪ್ರಕಾಶ್ ಗೌಡ ಚಾಲನೆ ನೀಡಿದರು. ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಡಾ. ಸಂತೃಪ್ತ್, ಕೆ.ಆರ್. ಆಸ್ಪತ್ರೆಯ ಡಾ. ಯೋಗೀಶ್ ಹಾಗೂ ಯಶ್ಟೆಲ್ ಸಂಸ್ಥೆಯ ಮಾಲೀಕ ಕೆ.ಎಂ. ಮಂಜುನಾಥ್ ಉಪಸ್ಥಿತರಿದ್ದರು.