Monday, August 8, 2022

Latest Posts

ಮೈಸೂರಿನ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ‘ರಣಬೇಟೆಗಾರ’!

ಹೊಸದಿಗಂತ ವರದಿ, ಮೈಸೂರು:

ಉಗ್ರರು, ದುಷ್ಟರು ಮುಂತಾದ ದೇಶ ದ್ರೋಹಗಳನ್ನು ಬೇಟೆಯಾಡುವ ರಣ ಬೇಟೆಗಾರ ಈಗ ಮೈಸೂರಿನ ಪೊಲೀಸ್ ಇಲಾಖೆಗೂ ಬಂದಿದೆ.
ಕೊಲೆಗಡುಕರು, ಕಳ್ಳರು, ದರೋಡೆಕೋರರು, ವಿದ್ವಂಸ ಕೃತಗಳನ್ನು ಎಸಗಿರುವವರನ್ನು ಇನ್ನೇನು ಕೆಲವು ತಿಂಗಳಲ್ಲಿ ಭೇಟೆಯಾಡುವ ಕೆಲಸಕ್ಕೆ ಇಳಿಯಲಿದೆ.
ದುಸ್ಕೃತ್ಯಗಳನ್ನ ಎಸಗಿದವರು, ಗಣ್ಯರ ಭದ್ರತೆಯ ವೇಳೆ ವಿದ್ವಂಸಕ ಕೃತ್ಯಗಳನ್ನು ಎಸಗಲು ಸಂಚು ಮಾಡುವವರನ್ನು ಪತ್ತೆ ಮಾಡಲೆಂದೇ ಇರುವ ಪೊಲೀಸ್ ಇಲಾಖೆಯ ಶ್ವಾನ ಪಡೆಗೆ ಸೇನೆ ಪಡೆಯಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಶ್ವಾನ (ಡಾಗ್)ವೊಂದು ಇದೀಗ ಸೇರ್ಪಡೆಯಾಗಿದೆ. ಬೆಲ್ಜಿಯಂ ಮಾಲಿನೋಯ್ಸ್ ತಳಿಯ ನಾಯಿಯನ್ನು ಇದೀಗ ಮೈಸೂರು ನಗರ ಪೊಲೀಸ್ ಪಡೆಗೆ ವ್ಯಕ್ತಿಯೊಬ್ಬರು ಉಚಿತವಾಗಿ ನೀಡಿದ್ದಾರೆ.
ಪ್ರಮೋದ್ ಎಂಬುವವರು ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಈ ವಿಶೇಷ ರಣಬೇಟೆಗಾರ ಶ್ವಾನ ಮರಿಯನ್ನು ತಂದು, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತರಿಗೆ ಹಸ್ತಾಂತರ ಮಾಡಿದರು.
ಈ ನಾಯಿಯ ಇವತ್ತಿನ ಮಾರುಕಟ್ಟೆ ಬೆಲೆ ಎಷ್ಟು ಗೊತ್ತೆ ಬರೋಬ್ಬರಿ 1.50 ಲಕ್ಷರೂಗೂ ಮೇಲ್ಪಟ್ಟು ಇದೆ. ಹಾಗಾದರೆ ಇದರ ಗುಣ ಲಕ್ಷಣಗಳೇನು ಗೊತ್ತಾ ಈ ನಾಯಿ ಬಹುಮುಖ ಪ್ರತಿಭೆ ಹೊಂದಿದೆ. ಯಾವಾಗಲೂ ಸಿಕ್ಕಾಪಟ್ಟೆ ಅಲರ್ಟ್ ಆಗಿ ಇರುತ್ತೆ.
ಹಾಗಾಗಿ ಸೇನೆಯಲ್ಲಿ ಹೆಚ್ಚಾಗಿ ಇದನ್ನು ಬಳಸುತ್ತಾರೆ. ಯಾವುದೇ ಪ್ರಕರಣದಲ್ಲಿ ಸುಳಿವು ನೀಡಲು ತುಂಬಾನೇ ಸಹಕಾರಿಯಾಗಲಿದೆ.
ಇದೀಗ ಮೈಸೂರು ಪೊಲೀಸರಿಗೆ ಹಸ್ತಾಂತರವಾಗಿರುವ ಈ ನಾಯಿಯ ವಯಸ್ಸು ಈಗ ಕೇವಲ 2 ತಿಂಗಳು ಮಾತ್ರ, ಇದನ್ನು ಪಳಗಸಿ, ತರಬೇತಿಯನ್ನು ನೀಡಿ, ಆ ನಂತರ ದುಷ್ಟರ ಬೇಟೆಗೆ ಇಳಿಸಲಿದ್ದಾರೆ ಪೊಲೀಸರು.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಈ ತಳಿಯ ನಾಯಿ ಇರೋದು ಬೆಂಗಳೂರಿನಲ್ಲಿ ಎರಡು ಹಾಗೂ ಮೈಸೂರಿನಲ್ಲಿ ಇದೊಂದು ಮಾತ್ರ. ಈ ನಾಯಿಯನ್ನ ಹಸ್ತಾಂತರ ಮಾಡುವ ವೇಳೆ ಇನ್ಸ್ಪೆಕ್ಟರ್ ಮೂರ್ತಿ, ಸಬ್ ಇನ್ಸ್ಪೆಕ್ಟರ್ ಸುರೇಶ್, ಶ್ವಾನ ತರಬೇತುದಾರ ಜಿ. ಮಂಜು ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss