Monday, August 8, 2022

Latest Posts

ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳ ಪರಿಹರಿಸಲು ಒತ್ತಾಯಿಸಿ ಎಬಿವಿಪಿಯಿಂದ ಕುವೆಂಪು ವಿವಿ ಕುಲಪತಿಗೆ ಎಬಿವಿಪಿ ಮನವಿ

ಹೊಸ ದಿಗಂತ ವರದಿ, ಶಿವಮೊಗ್ಗ:

ಪರೀಕ್ಷೆಗಳಿಗೆ ವಿವಿಧ ಸಮಸ್ಯೆಗಳ ಪರಿಹರಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಕುವೆಂಪು ವಿವಿ ಕುಲಪತಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪರೀಕ್ಷಾ ನಿಟ್ಟಿನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳವಾಗಿದೆ. ಕೊರೋ ಸಂದರ್ಭದಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿರುವುದು ಖಂಡನೀಯ. ಇದಷ್ಟೇ ಅಲ್ಲದೆ ಪದವಿ ಮತ್ತು ಸ್ನಾತಕೋತ್ತರ ಪದವಿ 2,4 ಮತ್ತು 2ನೇ ಸೆಮಿಸ್ಟ್ ವಿದ್ಯಾರ್ಥಿಗಳು ಕೊರೋನಾದ  ಸಂದರ್ಭದಲ್ಲಿ ಪ್ರಮೋಟ್ ಆಗಿದ್ದಾರೆ. ಈ ಸೆಮಿಸ್ಟ್ ಪರೀಕ್ಷೆಗಳು ನಡೆಯುತ್ತಿಲ್ಲವಾದ್ದರಿಂದ ವಿಶ್ವವಿದ್ಯಾಲಯವು ಇದನ್ನು ಪರಿಗಣಿಸಿ ಪಡೆದ ಪೂರ್ಣಪ್ರಮಾಣದ ಪರೀಕ್ಷಾ ಶುಲ್ಕವನ್ನು ಮುಂದಿನ ಸೆಮಿಸ್ಟ್ ಪರೀಕ್ಷೆಗಳಿಗೆ ಪರಿಗಣಿಸಬೇಕೆಂದು  ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss