Thursday, June 30, 2022

Latest Posts

18 ಸ್ಥಾನಗಳಲ್ಲಿ ಬಿಜೆಪಿ ದಾಖಲೆ‌ ಮತಗಳ ಅಂತರಗಳಲ್ಲಿ ಗೆಲುವು: ಸಚಿವ ಆನಂದ್ ಸಿಂಗ್

ಹೊಸ ದಿಗಂತ ವರದಿ, ಬಳ್ಳಾರಿ:

ವಿಧಾನ ಪರಿಷತ್ ಚುನಾವಣೆಯ 25 ಕ್ಷೇತ್ರಗಳಲ್ಲಿ 20ಕಡೆ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅದರಲ್ಲಿ 18 ಸ್ಥಾನಗಳಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಗಳು ದಾಖಲೆ‌ ಮತಗಳ ಅಂತರಗಳಲ್ಲಿ ಗೆಲುವು ಖಚಿತ ಎಂದು ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ನಗರದ ಮೋಕಾ ರಸ್ತೆಯ ಕೆಆರ್ ಎಸ್ ಫಂಕ್ಷನ್ ಹಾಲ್ ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಎಮ್ಮೆಲ್ಸಿ ಚುನಾವಣೆ ಅಭ್ಯರ್ಥಿ ವೈ.ಎಂ.ಸತೀಶ್ ಅವರ‌ ಮತಯಾಚನೆ ಸಭೆಯಲ್ಲಿ ಶುಕ್ರವಾರ ‌ಮಾತನಾಡಿದರು. ಕೇಂದ್ರ ಹಾಗೂ ನಮ್ಮ ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳೇ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ದೇಶದ ಜನರು ಗಮನಿಸಿದ್ದು, ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ, ಕುಗ್ಗುವ ಅವಶ್ಯಕತೆಯೇ ಇಲ್ಲ, ಈ ಚುನಾವಣೆ ಮುಂಬರುವ 2023ರ ಚುನಾವಣೆಯ ದಿಕ್ಸೂಚಿಯಾಗಲಿದೆ, ಪ್ರತಿಯೋಬ್ಬರೂ ಚುನಾವಣೆಯಲ್ಲಿ ‌ಬಿಜೆಪಿ‌ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು. ಗ್ರಾ.ಪಂ.ಸದಸ್ಯರಿಗೆ ಇದ್ದ 200 ರೂ.ಗೌರವ ಧನವನ್ನಜ 1 ಸಾವಿರ‌ ರೂ.ಗೆ ಹೆಚ್ಚಳ ಘೋಷಣೆ ಮಾಡಿದ್ದು, ಬಿ.ಎಸ್.ಯಡಿಯೂರಪ್ಪ ಅವರನ್ನು ಮರೆಯಕೂಡದು. ಪ್ರತಿ ಗ್ರಾ.ಪಂ.ಸದಸ್ಯರಿಗೆ 10ಸಾವಿರ ರೂ.ಗೌರವಧನ, ಗ್ರಾ.ಪಂ.ಅಧ್ಯಕ್ಷರಿಗೆ ಸರ್ಕಾರಿ ವಾಹನದ ವ್ಯವಸ್ಥೆ ಕುರಿತು ಪಕ್ಷದ ಅಧ್ಯಕ್ಷ ‌ನಳೀನ್ ಕುಮಾರ್ ಕಟೀಲ್ ಜೀ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಶೀಘ್ರದಲ್ಲೇ ‌ಈಡೇರಲಿದೆ. ಚುನಾವಣೆಯಲ್ಲಿ ಸೋಲು, ಗೆಲುವು ಸಹಜ, ಈ ಕುರಿತು ಸರ್ಕಾರ ಚಿಂತನೆ ನಡೆಸಿದ್ದು, ಚುನಾವಣೆ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ದೇಶಕ್ಕೆ ಅನ್ನ ನೀಡುವ ರೈತರು ಬೆಳೆ ಹಾನಿ, ಸಾಲ ಬಾಧೆಗೆ ಹೆದರಿ ಆತ್ಮಹತ್ಯೆ ದಾರಿ‌ ಹಿಡಿಯಕೂಡದು, ನಮ್ಮೊಂದಿಗೆ ‌ನಾವಿದ್ದೇವೆ, ಇತ್ತೀಚೆಗೆ ಸುರಿದ ಮಳೆಯಿಂದ ಮೆಣಸಿನಕಾಯಿ, ಹತ್ತಿ‌ ಸೇರಿ ನಾನಾ‌ ಬೆಳೆಗಳು ‌ಹಾನಿಯಾಗಿದ್ದು, ಈ ಕುರಿತು ಸರ್ವೆ ನಡೆಸಿ ಕೂಡಲೇ ವರದಿ ನೀಡಿ ಎಂದು‌ ಉಭಯ ಜಿಲ್ಲೆಯ ಜಿಲ್ಲಾಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲೇ ಪರಿಹಾರ ದೊರೆಯಲಿದೆ. ರೈತರು ಯಾವುದೇ ಕಾರಣಕ್ಕೂ ಆತಂಕಬೇಡ ಎಂದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು‌ ಮಾತನಾಡಿ, ಅಮೀತ್ ಶಾ, ಜೆ.ಪಿ.ನಡ್ಡಾ, ಮೋದಿ ಅವರ ಹೊಡೆತಕ್ಕೆ ದೇಶದಲ್ಲಿ ಕಾಂಗ್ರೆಸ್ ಸಂಪಾದಕರ ‌ನೆಲಕಚ್ಚಿದೆ. ಇನ್ನೂ ಅಲ್ಲಲ್ಲಿ ಉಳಿದಿಕೊಂಡಿದ್ದು, ಸಂಪೂರ್ಣ ‌ಕಿತ್ತೋಗೆಯಬೇಕಿದೆ. ಜಮೀನಿನಲ್ಲಿ ‌ಕಳೆ‌ಬಂದಂತೆ ಅಲ್ಲಲ್ಲಿ ‌‌ಕಾಂಗ್ರೆಸ್ ಕಾಣಿಸುತ್ತಿದೆ, ಅದನ್ನು ಬೇರು ಸಮೇತ ‌ಕಿತ್ತೊಗೆಯಲು ಜನರು ತೀರ್ಮಾನ ಮಾಡಿದ್ದಾರೆ, ಕೇಂದ್ರ ಹಾಗೂ ನಮ್ಮ ರಾಜ್ಯದ ಜನಪರ ಕಾರ್ಯಕ್ರಮಗಳೇ ಚುನಾವಣೆಯಲ್ಲಿ ಶ್ರೀರಕ್ಷೆಯಾಗಲಿದೆ. ನಮ್ಮ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಚಿತ್ರಣವೇ ಬದಲಾಗಿದೆ. ಮಾಜಿ ಸಚಿವ ಜನಾರ್ಧನ್ ‌ರೆಡ್ಡಿ ಅವರು ಉಸ್ತುವಾರಿ ಸಚಿವರಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದು, ಇಂದಿಗೂ ಮಾದರಿಯಾಗಿವೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದು, ಇಲ್ಲಿವರೆಗೂ ಇಂದು ನಿರ್ಮಿಸಿದ ರಸ್ತೆಗಳಂತೆ ಕಾಣುತ್ತಿವೆ, ಸಾರಿಗೆ ಇಲಾಖೆಗೆ ಮತ್ತಷ್ಟು ಹೆಚ್ಚು ಸ್ಪರ್ಷ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ‌ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಬೇಕು ಎನ್ನುವ ಉದ್ದೇಶವಿದೆ. ಅದು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ. ಕಾಂಗ್ರೆಸ್ ನವರ ಸುಳ್ಳು ‌ಭರವಸೆ,‌ ಬಣ್ಣದ‌ ಮಾತುಗಳಿಗೆ ‌ಮರುಳಾಗದೇ ಪ್ರತಿಯೋಬ್ಬರೂ ಬಿಜೆಪಿ ಬೆಂಬಲಿಸಿ ‌ಆರ್ಶಿವಾದಿಸಬೇಕು‌ ಎಂದು‌ ಮನವಿ ‌ಮಾಡಿದರು. ಈ ಸಂದರ್ಭದಲ್ಲಿ ‌ಅಭ್ಯರ್ಥಿ ವೈ.ಎಂ.ಸತೀಶ್, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಮಾಜಿ ಸಂಸದರಾದ ಸಣ್ಣ ಫಕೀರಪ್ಪ, ಜೆ.ಶಾಂತಾ, ಸಫಾಯಿ ಕರ್ಮಚಾರಿ ಅಭಿವೃದ್ಧಿ ‌ನಿಗಮದ ಅಧ್ಯಕ್ಷ ‌ಎಚ್.ಹನುಮಂತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ‌ಎಸ್.ಗುರುಲಿಂಗನಗೌಡ, ಕೆ.ರಾಮಲಿಂಗಪ್ಪ ಮಾತನಾಡಿದರು. ಬೂಡಾ ಮಾಜಿ ಅಧ್ಯಕ್ಷ ದಮ್ಮೂರ್ ಶೇಖರ್, ಸಂಸದ ವೈ.ದೇವೇಂದ್ರಪ್ಪ, ಡಾ.ಮಹಿಪಾಲ್, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಐನಾಥ ರೆಡ್ಡಿ, ಡಾ.ಬಿ.ಕೆ.ಸುಂದರ್, ಶ್ರೀನಿವಾಸ್ ಮೋತ್ಕರ್, ವೀರಶೇಖರ್ ರೆಡ್ಡಿ, ಮುರಾಹರಗೌಡ, ನ್ಯಾಯವಾದಿ ವಿಜಯಲಕ್ಷ್ಮಿ, ರಾಮಚಂದ್ರಪ್ಪ, ಓಬಳೇಶ್ ಸೇರಿದಂತೆ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss