Tuesday, June 28, 2022

Latest Posts

ಗೋವುಗಳ ಅಕ್ರಮ ಸಾಗಾಟ ತಡೆಗೆ ವಿಎಚ್‌ಪಿ-ಬಜರಂಗದಳ ಮನವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ವರದಿ, ಚಿತ್ರದುರ್ಗ:

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಇದ್ದರೂ ಸಹ ಅಕ್ರಮ ಗೋವುಗಳ ಸಾಗಾಣಿಕೆ, ಗೋವುಗಳ ಹತ್ಯೆ ನಡೆಯುತ್ತಿದ್ದು,
ಇದನ್ನು ತಡೆಯಲು ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ -ಬಜರಂಗದಳದ
ಕಾರ್ಯಕರ್ತರು ಜಿಲ್ಲಾ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಅಕ್ರಮವಾಗಿ ಗೋವು ಸಾಗಾಟ, ಗೋವುಗಳ ಹತ್ಯೆ ಮಾಡಲಾಗುತ್ತಿದೆ. ಅಕ್ರಮವಾಗಿ ಗೋವುಗಳ ಮಾಂಸವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ. ಇದೇ ಜು.21ರಂದು ನಡೆಯುವ ಬಕ್ರೀದ್ ಹಬ್ಬದ ನೆಪದಲ್ಲಿ ಅತಿ ಹೆಚ್ಚು ಗೋವುಗಳನ್ನು ಕುರ್ಬಾನಿ ಮಾಡುವ ಸಂಭವವಿದೆ. ಹಾಗಾಗಿ ಪೊಲೀಸ್ ಇಲಾಖೆ ಈ ಕುರಿತು ತೀವ್ರ ನಿಗಾ ವಹಿಸಬೇಕೆಂದು ಒತ್ತಾಯಿಸಿದರು.
ಹೊಸ ಕಾಯ್ದೆಯ ಅನ್ವಯ ಗೋ-ಹತ್ಯೆ ನಿಯಂತ್ರಣ ಜಾನುವಾರ ಸಂರಕ್ಷಣಾ ವಿಧೇಯಕದ ಮೂಲಕ ಕರ್ಬಾನಿ ನಿಷೇಧಿಸಲಾಗಿದೆ. ಈ ಕಾಯ್ದೆಯ ಅನ್ವಯ ಸೆಕ್ಷನ್ 12 ರಂತೆ ಗೋವುಗಳ ವಧೆಗೆ ಕನಿಷ್ಠ 3 ವರ್ಷದಿಂದ 7 ವರ್ಷದವರೆಗೆ ಜೈಲು ವಾಸ, 1 ಲಕ್ಷದಿಂದ ಗರಿಷ್ಠ 5 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ಸೆಕ್ಷನ್ 14 ರಂತೆ ವಧೆ (ಕುರ್ಬಾನಿ) ಮಾಡಿದ ಸ್ಥಳಗಳಾದ ಕಟ್ಟಡ, ಮನೆ, ಖಾಸಗಿ ಸ್ಥಳ, ತೋಟ ಇತ್ಯಾದಿ ಸ್ಥಳಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಬಹುದು ಎಂದರು.
ರಾಜ್ಯ ಸರ್ಕಾರವು ಗೋ-ಹತ್ಯೆ ವಿಷಯವಾಗಿ ಸಂಘರ್ಷವಾಗಬಾರದೆಂದು ಗೋ-ಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿದ್ದರೂ ಸಹ ಕಾನೂನು ಉಲ್ಲಂಘನೆ ಮಾಡಿ ಗೋವುಗಳನ್ನು ವಧೆ ಮಾಡಲಾಗುತ್ತಿದೆ. ಚಿತ್ರದುರ್ಗ ನಗರದಲ್ಲಿ ಅಕ್ರಮವಾಗಿ ಕೆಲವು ಮನೆಗಳಲ್ಲಿ ಗೋ ವಧೆಯನ್ನು ಮಾಡಿ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವುಗಳನ್ನು ಅಕ್ರಮವಾಗಿ ಕಂಟೈನರ್, ಈಚರ್, ಲಾರಿಗಳಲ್ಲಿ ಕಳ್ಳತನ ಮಾಡಿ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಎಪಿಎಂಸಿಯಲ್ಲಿ ರೈತರ ಬಳಿಯೂ ಸಹ ಖರೀದಿ ಮಾಡಿ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದಾರೆ. ಆದ್ದರಿಂದ ಚಿತ್ರದುರ್ಗ
ನಗರ ಹಾಗೂ ಜಿಲ್ಲೆಯಾಧ್ಯಂತ ಗಡಿಭಾಗಗಳಾದ ಕೆಲವು ಪ್ರದೇಶಗಳಿಗೆ ಚೆಕ್‌ಪೋಸ್ಟ್‌ಗಳ ನಿರ್ಮಾಣ ಮಾಡಿ ಗೋವುಗಳ ಅಕ್ರಮ ಸಾಗಾಟ ತಡೆಯಬೇಕಿದೆ. ಪಶುಸಂಗೋಪನಾ ಇಲಾಖೆಯ ಸಚಿವಾಲಯ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮೇಲ್ಪಟ್ಟ ಅಧಿಕಾರಿ ರೈಡ್ ಮಾಡುವ ಕಾನೂನು ತಂದರು ಸಹ ಯಾವುದೇ ರೀತಿಯಲ್ಲಿ ಸರಿಯಾಗಿ ರೈಡ್ ಆಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ದಯವಿಟ್ಟು ಪೊಲೀಸರು ಈ ಬಗ್ಗೆ ಗಮನ ನೀಡಬೇಕು. ಅಕ್ರಮ ಕಸಾಯಿಖಾನೆ, ಅಕ್ರಮ ಗೋಹತ್ಯೆ, ಅಕ್ರಮ ಗೋಸಾಗಾಣಿಕೆ
ತಕ್ಷಣ ಬಂದ್ ಮಾಡಬೇಕು. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ ಇದರ ವಿರುದ್ದ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಗೋರಕ್ಷಕ್ ಪ್ರಮುಖ್ ಪಿ.ರುದ್ರೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss