spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದ ‘ಪಾಲಿಕ್ಲಿನಿಕ್’

- Advertisement -Nitte

ಹೊಸ ದಿಗಂತ ವರದಿ, ಮಂಡ್ಯ :

ಜಾನುವಾರುಗಳನ್ನು ಉತ್ತಮ ರೀತಿಯಲ್ಲಿ ಆರೈಕೆ, ರೋಗಗಳಿಂದ ರಕ್ಷಣೆ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ನರಳುತ್ತಿರುವ ಮೂಕ ಪ್ರಾಣಿಗಳಿಗೆ ಶಸಚಿಕಿತ್ಸೆ ನಡೆಸಿ ಅವುಗಳ ಜೀವ ಉಳಿಸುವ ಸದುದ್ದೇಶದೊಂದಿಗೆ ಆರಂಭಿಸಲಾಗಿರುವ ಪಾಲಿ ಕ್ಲಿನಿಕ್ ಜಾನುವಾರುಗಳಿಗೆ ವರದಾನವೆಂಬಂತೆ ಕಾರ್ಯನಿರ್ವಹಿಸುತ್ತಿದೆ.
ನಗರದ ಕಾಳಿಕಾಂಬ ದೇವಸ್ಥಾನದ ಬಳಿ ಇರುವ ಪಶು ಆಸ್ಪತ್ರೆ ಪಕ್ಕ ವಿಶಾಲವಾಗಿ ತಲೆಎತ್ತಿರುವ ಪಾಲಿ ಕ್ಲಿನಿಕ್ ಜಾನುವಾರುಗಳ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಸುಸಜ್ಜಿತ ಕಟ್ಟಡದಲ್ಲಿ ಉತ್ತಮ ಸೌಲಭ್ಯ
ಸುಸಜ್ಜಿತವಾದ ಕಟ್ಟಡದೊಂದಿಗೆ 27 ಸೆಪ್ಟೆಂಬರ್ 2019ರಲ್ಲಿ ಆರಂಭಗೊಂಡ ಪಾಲಿ ಕ್ಲಿನಿಕ್ ಆರಂಭದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಹಿನ್ನಡೆ ಕಂಡಿತ್ತು. ರಾಜ್ಯಸರ್ಕಾರ ಪಾಲಿ ಕ್ಲಿನಿಕ್ ತೆರೆದ ಬಳಿಕ ಸೌಲಭ್ಯಗಳನ್ನು ಕಲ್ಪಿಸಿಕೊಡದಿದ್ದರಿಂದ ಜಾನುವಾರುಗಳಿಗೆ ಉತ್ತಮ ಸೇವೆ ಒದಗಿಸುವುದು ಸಾಧ್ಯವಾಗಲಿಲ್ಲ. ಪಾಲಿ ಕ್ಲಿನಿಕ್‌ನೊಳಗೆ ವಿಶಾಲವಾದ ಶಸಚಿಕಿತ್ಸಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ರಕ್ತ ಸಂಬಂಧಿ ಕಾಯಿಲೆ ಪತ್ತೆಗೆ ಪ್ರಯೋಗಾಲಯ, ಎಕ್ಸ್-ರೇ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ರೋಗ ನಿರ್ಣಯ ಪರೀಕ್ಷಿಸುವ ಸಾಧನಗಳ  ಅಳವಡಿಸಲಾಗಿದೆ.
ಹಸು, ದನ, ಎಮ್ಮೆ, ನಾಯಿ, ಕುರಿ, ಆಡು, ಕೋಳಿ, ಬೆಕ್ಕು ಸೇರಿದಂತೆ ಇನ್ನಿತರ ಪ್ರಾಣಿಗಳಿಗೆ ಬೇಕಾದ ಎಲ್ಲ ರೀತಿಯ ಔಷಧಗಳು ಪಾಲಿ ಕ್ಲಿನಿಕ್‌ನಲ್ಲಿ ದಾಸ್ತಾನಿದ್ದರೂ ಸಿಬ್ಬಂದಿ ಸಮಸ್ಯೆ ಕಾಡುತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss