ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮತೀಯವಾದಿಗಳ ಹಿಂಸೆ: ಸಾಮಾಜಿಕ ಮಾಧ್ಯಮಗಳ ಮೇಲೆ ಪಾಕ್ ನಿರ್ಬಂಧ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪಾಕಿಸ್ತಾನದಲ್ಲಿ ಇಸ್ಲಾಮಿಕ್‌ವಾದಿ ರಾಜಕೀಯ ಪಕ್ಷ ತೇಹ್ರೀಕ್ ಇ ಲಬಾಯಿಕ್ ಪಾಕಿಸ್ತಾನ್(ಟಿಎಲ್‌ಪಿ)ನ ಬೆಂಬಲಿಗರು ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪಾಕ್ ಸರಕಾರ ಶುಕ್ರವಾರ ಫೇಸ್‌ಬುಕ್, ವಾಟ್ಸ್ಯಾಟ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸಿದೆ.
ನಿಷೇತ ಇಸ್ಲಾಮಿಕ್ ತೀವ್ರವಾದಿ ಗುಂಪುಗಳು ನಡೆಸುತ್ತಿರುವ ಸಂಘಟಿತ ಹಿಂಸಾತ್ಮಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ.  ಕಳೆದ ವರ್ಷ ಫ್ರಾನ್ಸ್‌ನಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದ ಹಿನ್ನೆಲೆಯಲ್ಲಿ ಫ್ರಾನ್ಸ್ ರಾಯಭಾರಿಯನ್ನು ಉಚ್ಚಾಟಿಸಬೇಕು ಎಂದು ಬೇಡಿಕೆ ಮಂಡಿಸಿ ಈ ಗುಂಪು ಪ್ರತಿಭಟನೆಗೆ ಇಳಿದ ಹಿನ್ನೆಲೆಯಲ್ಲಿ ಈ ಗುಂಪಿನ ಮುಖ್ಯಸ್ಥ ಸಾದ್ ಹುಸೈನ್ ರಿಜ್ವಿ ಎಂಬಾತನನ್ನು ಪಾಕ್ ಸರಕಾರ ಬಂಧಿಸಿದೆ. ಇದನ್ನು ವಿರೋಧಿಸಿ ಈಗ ಗುಂಪು ಪಾಕಿಸ್ತಾನದಾದ್ಯಂತ ಪ್ರತಿಭಟನೆಯಲ್ಲಿ ತೊಡಗಿದ್ದು, ಪಾಕ್ ಸರಕಾರ ಈ ಗುಂಪನ್ನು ಗುರುವಾರ ನಿಷೇಧಿಸಿತ್ತು.ಹಿಂಸೆಗೆ ಈಗಾಗಲೇ ಕನಿಷ್ಠ 7ಮಂದಿ ಬಲಿಯಾಗಿ 300ಕ್ಕೂ ಅಧಿಕ ಪೊಲೀಸರು ಗಾಯಗೊಂಡಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ಬಳಿಕ ಗುಂಪು ಇನ್ನಷ್ಟು ಹಿಂಸೆಯಲ್ಲಿ ತೊಡಗುವ ಸಾಧ್ಯತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಕ್ ಒಳಾಡಳಿತ ಸಚಿವಾಲಯ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ .

 

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss