ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಶಿವಮೊಗ್ಗ:
ಉನ್ನತ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಸಂಸ್ಥೆಗಳ ಜಾಗತಿಕ ರ್ಯಾಂಕಿಂಗ್ ಅನ್ನು ನಿರ್ಧರಿಸುವ
ಪ್ರತಿಷ್ಠಿತ ಸೈಮ್ಯಾಗೋ ಪಟ್ಟಿಯು ಇತ್ತೀಚೆಗೆ ಬಿಡುಗಡೆಯಾಗಿದೆ. ಕುವೆಂಪು ವಿವಿ ಭಾರತದ ವಿಶ್ವವಿದ್ಯಾಲಯಗಳ ಪೈಕಿ 56ನೇ
ಸ್ಥಾನ ಪಡೆದ ಸಾಧನೆ ಮಾಡಿದೆ. ಕಳೆದ ವರ್ಷ 66ನೇ ಸ್ಥಾನದಲ್ಲಿದ್ದ ವಿಶ್ವವಿದ್ಯಾಲಯ, 2021ರ ಸಾಲಿನಲ್ಲಿ ಸಂಶೋಧನಾ ಮಾನದಂಡದಲ್ಲಿ 41ನೇ ಸ್ಥಾನ, ನಾವೀನ್ಯತೆಯಲ್ಲಿ 38ನೇ ಸ್ಥಾನ ಮತ್ತು ಸಾಮಾಜಿಕ ಪ್ರಭಾವ ಮಾನದಂಡದಲ್ಲಿ 26ನೇ
ಸ್ಥಾನ ಪಡೆದಿದ್ದು, ಸಮಗ್ರವಾಗಿ 56ನೇ ಸ್ಥಾನ ಪಡೆದಿದೆ.
ಜಾಗತಿಕ ವಿಶ್ವವಿದ್ಯಾಲಯಗಳ ಸಮಗ್ರ Rank ಪಟ್ಟಿಯಲ್ಲಿ ಕುವೆಂಪು ವಿ.ವಿ. 569ನೇ ಸ್ಥಾನ ಗಳಿಸಿದೆ. ಏಷ್ಯಾ ವಲಯದಲ್ಲಿ
1437 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 303ನೇ ಸ್ಥಾನಗಳಿಸಿದೆ. ಭಾರತದ ವಿಶ್ವವಿದ್ಯಾಲಯಗಳ ಪಟ್ಟಿಯೊಳಗೆ 56ನೇ ಸ್ಥಾನ ಗಿಟ್ಟಿಸಿದೆ. ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಕರ್ನಾಟಕ ಮೂಲದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮೊದಲನೇ
ಸ್ಥಾನದಲ್ಲಿದ್ದರೆ, ಮಣಿಪಾಲ ವಿಶ್ವವಿದ್ಯಾಲಯ 15ನೇ ಸ್ಥಾನದಲ್ಲಿದೆ. ಜೈನ್ ವಿಶ್ವವಿದ್ಯಾಲಯ 48ನೇ ಸ್ಥಾನದಲ್ಲಿದ್ದರೆ, ಯೆನೋಪಾಯ
ವಿ.ವಿ. 49ನೇ ಸ್ಥಾನದಲ್ಲಿದೆ.
ಕರ್ನಾಟಕದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪೈಕಿ ಕುವೆಂಪು ವಿವಿ 56ನೇ ರ್ಯಾಂಕಿಂಗ್ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ (60), ಮೈಸೂರು ವಿಶ್ವವಿದ್ಯಾಲಯ (80), ಕರ್ನಾಟಕ ವಿ.ವಿ. (110), ಮತ್ತು ಮಂಗಳೂರು ವಿಶ್ವವಿದ್ಯಾಲಯ (112)ಗಳು ಸ್ಥಾನ ಪಡೆದುಕೊಂಡಿವೆ.