Saturday, August 13, 2022

Latest Posts

ಗ್ರಾಮದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡಿ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಮರೆತು ಗ್ರಾಮದ ಎಲ್ಲರೂ ಶಾಲೆಯ ಮತ್ತು ಗ್ರಾಮದ ಅಭಿವೃದ್ಧಿಗೆ ಪಕ್ಷ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಲಹೆ ಮಾಡಿದರು.
ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಉನ್ನತೀಕರಣ ಹಿರಿಯ ಪ್ರಾಥಮಿಕ ಶಾಲೆಯ ನೂತನ ನಲಿ-ಕಲಿ ೧ನೇ ತರಗತಿ ಇಂಗ್ಲಿಷ್ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಇದು ಚಿತ್ರದುರ್ಗ ಕಸಬಾದಲ್ಲಿ ದೊಡ್ಡ ಜನಸಂಖ್ಯೆ ಹೊಂದಿರುವ ಗ್ರಾಮವಾಗಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಮೆದೇಹಳ್ಳಿ, ಜಿ.ಆರ್.ಹಳ್ಳಿ ದೊಡ್ಡ ಜನಸಂಖ್ಯೆ ಹೊಂದಿರುವ ಹೋಬಳಿಗಳಾಗಿವೆ ಎಂದು ಹೇಳಿದರು.
ದೊಡ್ಡಸಿದ್ದವ್ವನಹಳ್ಳಿಗೆ ಅನೇಕ ಬಾರಿ ಭೇಟಿ ನೀಡಿದ್ದು ಶಾಲೆಯ ಕೊಠಡಿಗಳು ಸಾಕಷ್ಟು ಶಿಥಿಲ ವ್ಯವಸ್ಥೆಯನ್ನು ನೋಡಿ ೯೫ ಲಕ್ಷ ವೆಚ್ಚದಲ್ಲಿ ಕೊಠಡಿಗೆ ನಬರ್ಡ್ ಮತ್ತು ಡಿಎಂಎಫ್‌ನಲ್ಲಿ ಹಣ ನೀಡಿದ್ದೇನೆ. ೭೫ ಲಕ್ಷ ಹಣವನ್ನು ಸಿ.ಸಿ.ರಸ್ತೆ ನೀಡಿದ್ದೇನೆ. ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ತುರ್ತು ಕೆಲಸ ಆಗಬೇಕಿದೆ. ನಮ್ಮ ಕಾಲದಲ್ಲಿ ೬೦-೭೦ ವರ್ಷದ ಕೆಳಗೆ ನನಗೆ ಸಹಾಯ ಮಾಡಿದ ಜನರು ಮತ್ತು ಅಂದಿನ ಕಾಲದಲ್ಲಿ ಶಿಕ್ಷಣ ನೀಡಿದ ಶಿಕ್ಷಕರು ಮರೆಯುವಾಗಿಲ್ಲ. ಅಂತಹ ಕಷ್ಟ ಕಾಲದಲ್ಲಿ ಶಿಕ್ಷಣ ಪಡೆದಿದ್ದೇವೆ ಎಂದರು.
ಆದರೆ ಇಂದು ಕಾಲ ಬದಲಾಗಿದ್ದು, ಸರ್ಕಾರ ಇಂದಿನ ಮಕ್ಕಳಿಗೆ ಹಾಸ್ಟೆಲ್, ಉತ್ತಮ ಶಾಲೆಯ ಸೌಲಭ್ಯ ಸೇರಿ ಪದವಿ ಶಿಕ್ಷದವರೆಗೂ ಸಹ ಉಚಿತ ಶಿಕ್ಷಣ ನೀಡಲಾಗುತ್ತಿದೆ. ದೇಶಕ್ಕಾಗಿ ಮಾಜಿ ಮೇಯರ್ ಆಗಿ ಸೇವೆ ಸಲ್ಲಿಸಿ ಬಂದಿರುವ ವಾಸದೇವರೆಡ್ಡಿ ಅವರು, ತಾನು ಕಲಿತ ಶಾಲೆಗೆ ಮತ್ತು ಊರಿನ ಮಕ್ಕಳಿಗಾಗಿ ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಕೈಲಾದ ಸಹಾಯ ಮಾಡಿ ಎಲ್ಲ್ಲರಿಗೂ ಮಾದರಿಯಾಗಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ಸೌಲಭ್ಯ ದೊರೆಕಿಸುತ್ತೇನೆ ಎಂದಿದ್ದಾರೆ. ಇಂತಹ ವ್ಯಕ್ತಿ ಮತ್ತು ಅವರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದರು.
ಕೋವಿಡ್ ಸಂದರ್ಭದಲ್ಲಿ ತುಂಬಾ ಬಾಲಕಿಯರಿಗೆ ಅನ್ಯಾಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸರ್ಕಾರ ಕಾನೂನು ಕ್ರಮಗಳಿದ್ದರು. ಕುಟುಂಬದ ಆರ್ಥಿಕ ಮುಗ್ಗಟ್ಟು ಮತ್ತು ತಂದೆ, ತಾಯಿಯ ಒತ್ತಡದಿಂದ ಬಾಲ್ಯ ವಿವಾಹವಾಗಿ ಹೋಗಿದ್ದಾರೆ. ಹೀಗೆ ಆಗದಂತೆ ಕ್ರಮ ವಹಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದರು.
ದೇಶದಲ್ಲಿ 100 ಕೋಟಿ ವ್ಯಾಕ್ಸಿನ್ ಹಾಕಿರುವುದು ಇತಿಹಾಸವಾಗಿದೆ. ಮೊದಲನೇ ಅಲೆಯ ಸಂದರ್ಭದಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದರೆ ಎರಡನೇ ಅಲೆಯ ಪರಿಣಾಮ ನಾವು ಎದುರಿಸುತ್ತಿರಲಿಲ್ಲ. ಹೊರದೇಶಗಳಿಗೆ ವ್ಯಾಕ್ಸಿನ್ ಸರಬರಾಜು ಮಾಡಲಾಯಿತು. ನಮ್ಮ ದೇಶದಲ್ಲಿ ಕೋವಿಡ್ ಆಶಾ ಕಾರ್ಯಕರ್ತರು, ನಗರಸಭೆ, ಅಂಗನವಾಡಿ ಕಾರ್ಯಕರ್ತರು, ಪೋಲಿಸ್ ಇಲಾಖೆಯವರು ತಮ್ಮ ಸ್ವಂತ ತಂದೆ ತಾಯಿಯ ಬಳಿ ಹೋಗಲು ಭಯದ ವಾತವರಣದಲ್ಲಿ ವಾರಿಯರ್ಸ್ ರೀತಿ ಎಲ್ಲಾ ಇಲಾಖೆಯವರು ಸೇವೆ ಸಲ್ಲಿಸಿದ್ದನ್ನು ನೆನಪಿಸಿಕೊಂಡರು.
ಡಿಡಿಪಿಐ ರವಿಶಂಕರರೆಡ್ಡಿ ಮಾತನಾಡಿ, ಶಾಸಕರ ಶಿಫಾರಸ್ಸಿನ ಮೇಲೆ ಇಂಗ್ಲಿಷ್ ಶಾಲೆಯಾಗಿದೆ. ಶಾಸಕರು ಶಿಕ್ಷಣ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ 30 ಕೋಟಿ ಅನುದಾನ ನೀಡಿರುವುದಕ್ಕೆ ಶಿಕ್ಷಣ ಇಲಾಖೆ ಪರವಾಗಿ ಅಭಿನಂದನೆಗಳು. ಹಳೆಯ ಫ್ರೌಢಶಾಲೆ ತೆಗೆದು ಹೊಸ ಕೊಠಡಿ ಕಟ್ಟಿ ದೊಡ್ಡ ಕ್ಯಾಂಪಸ್ ಮಾಡುವ ಕನಸು ಶಾಸಕರಾದ್ದಾಗಿದೆ. ಗ್ರಾಮೀಣ ಭಾಗದ ಮಕ್ಕಳು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಬೇಕು ಎಂಬ ಆಶಯ ಹೊಂದಿದ್ದಾರೆ ಎಂದು ಶಾಸಕ ಕಾರ್ಯವನ್ನು ಸ್ಮರಿಸಿದರು.
ಶಾಲಾ ಕೊಠಡಿಗೆ ವಿವಿಧ ಸೌಲಭ್ಯ ನೀಡಿದ ದಾನಿಗಳಾದ ಮಾಜಿ ಮೇಜರ್ (ಸೈನಿಕ) ವಾಸದೇವ ರೆಡ್ಡಿ, ಗ್ರಾ.ಪಂ. ಅಧ್ಯಕ್ಷೆ ಭಾರತಿ, ಕ್ಷೇತ್ರ ಶಿಕ್ಷಣಧಿಕಾರಿ ಈಶ್ವರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಮುಖ್ಯಶಿಕ್ಷಕಿ ಸುಧಾ, ಶಿಕ್ಷಕರಾದ ಹನುಂತರೆಡ್ಡಿ, ತ್ರಿವೇಣಿ, ಗ್ರಾ.ಪಂ. ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss