ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ವಿಜಯಪುರ:
ವಾರಸುದಾರರು ಬಾರದ ಕಾರಣ ಹಾಗೇ ಉಳಿದುಕೊಂಡಿದ್ದ ಕೊರೋನಾ ಸೋಂಕಿತ 50 ಕ್ಕೂ ಹೆಚ್ಚು ಜನರ ಅಸ್ಥಿಗಳಿಗೆ, ವಿಪ್ರ ಕ್ರಿಯಾಕರ್ಮ ಟ್ರಸ್ಟ್ ಆಶ್ರಯದಲ್ಲಿ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಜಿಲ್ಲೆಯ ಯಲಗೂರು ಬಳಿಯ ಕೃಷ್ಣಾನದಿಗೆ ಭಾನುವಾರ ವಿಸರ್ಜನೆ ಮಾಡುವ ಮೂಲಕ ಮುಕ್ತಿ ನೀಡಲಾಯಿತು.
ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಕೊರೋನಾಕ್ಕೆ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಿದ ಕುಟುಂಬಸ್ಥರು, ಮರಳಿ ಬಾರದ ಹಿನ್ನೆಲೆ, ಮೃತಪಟ್ಟವರ ಅಸ್ಥಿಗಳು ಇಲ್ಲಿನ ದೇವಗಿರಿ ಸ್ಮಶಾನದಲ್ಲಿ ಉಳಿದುಕೊಂಡಿದ್ದವು.
ವಿಪ್ರಕ್ರಿಯಾ ಕರ್ಮ ಟ್ರಸ್ಟ್ ನ ಪುರೋಹಿತ ಪ್ರಸನ್ನ ಆಚಾರ್ಯ ಕಟ್ಟಿ, ಸುರೇಶ ಆಚಾರ್ಯ ಅಂಕಲಗಿ ಅವರು ಧಾರ್ಮಿಕ ವಿಧಿವಿಧಾನ ಪ್ರಕ್ರಿಯೆ ನಡೆಸುವ ಮೂಲಕ ಜಿಲ್ಲೆಯ ಯಲಗೂರ ಬಳಿಯ ಕೃಷ್ಣಾ ನದಿಗೆ ಸೋಂಕಿತರ ಅಸ್ಥಿ ವಿಸರ್ಜನೆ ಕಾರ್ಯ ನೆರವೇರಿಸಿದರು.
ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತುಳಸಿರಾಮ ಸೂರ್ಯವಂಶಿ, ಮನೋಜ ಶಹಾಪುರ ಇದ್ದರು.