ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾರಿಗೆ ನೌಕರರ ದಾರಿ ತಪ್ಪಿಸುವ ಕೆಲಸ: ರಾಜಕುಮಾರ್ ಪಾಟೀಲ್

ಹೊಸ ದಿಗಂತ ವರದಿ, ಕಲಬುರಗಿ:

ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲ್ಲೂ ಸಾರಿಗೆ ನೌಕರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಶಾಸಕ, ಎನ್ ಈ ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್ ಪರೋಕ್ಷವಾಗಿ ಕೊಡಿಹಳ್ಳಿ ಚಂದ್ರಶೇಖರ ವಿರುದ್ಧ ಹರಿಹಾಯ್ದಿದ್ದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆಯ ಬಗ್ಗೆ ಮಾಹಿತಿ ಇಲ್ಲವದವರು ಹೋರಾಟದ ನೇತೃತ್ವ ವಹಸಿಕೊಂಡಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲ್ಲೂ ಸಾರಿಗೆ ನೌಕರರ ದಾರಿ ತಪ್ಪಿಸಿತ್ತಿದ್ದಾರೆ ಹೀಗಾಗಿ ಇಲಾಖೆಯ ಬಗ್ಗೆ ಮಾಹಿತಿ ಇರುವವರಿಗೆ ಹೋರಾಟದ ನೇತೃತ್ವ ವಹಿಸಿ ಎಂದು ರಾಜಕುಮಾರ್ ಪಾಟೀಲ್ ಹೇಳಿದರು.
ಇನ್ನೂ ಸರ್ಕಾರ ಸಾರಿಗೆ ನೌಕರರ ಎಂಟು ಬೇಡಿಕೆಗಳನ್ನು ಹೀಗಾಗಲೆ ಈಡೆರಿಸಿದೆ. ಆರನೇ ವೇತನ ಜಾರಿ ಮಾತ್ರ ಬಾಕಿ ಉಳಿದಿದೆ.
ಕೋವಿಡ್ ಕಾರಣದಿಂದಾಗಿ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಿಗಿದೆ ಹಾಗೂ ಉಪ ಚುನಾವಣೆ ಹಿನ್ನೆಲೆ ನೀತಿ‌ ಸಂಹಿತೆ ಜಾರಿ ಇರುವುದರಿಂದ ಯಾವುದೆ ಭರವಸೆ ನೀಡಲಾಗುವುದಿಲ್ಲ ಹೀಗಾಗಿ ಮಾರ್ಚ 5ರ ವರೆಗೆ ಸಮಯ ನೀಡಿದರೆ ಎಲ್ಲವೂ ಸರಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಇನ್ನೂ ಸಾರಿಗೆ ನೌಕರರು ಹೋರಾಟಮಾಡುತ್ತಿರುವ ಸಮಯ ತಪ್ಪಾಗಿದೆ ವಿನಕಾರಣ ಸಾರ್ವಜನಿಕರಿಗೆ ಹಾಗೂ ಉತ್ಸಾಹದಿಂದ ಕೆಲಸ ಮಾಡಲು ಬರುವ ಸಿಬ್ಬಂದಿಗಳ ಮೇಲೆ ದಬ್ಬಾಳಿಕೆ ನಡೆಸಿದರೆ ಹಾಗೂ ಸಾರಿಗೆ ನಿಗಮಗಳ ಆಸ್ತಿ ಪಾಸ್ತಿಗರ ಹಾನಿ ಉಂಟುಮಾಡಿದ್ರೆ ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಟೀಲ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss