Wednesday, August 17, 2022

Latest Posts

ಎರಡು ಗುಂಪುಗಳ ನಡುವೆ ಸಂಘರ್ಷ: ಮುಳಕಟ್ಟೆ ದೇವಾಲಯಕ್ಕೆ ಬಿತ್ತು ಬೀಗ

ಹೊಸ ದಿಗಂತ ವರದಿ, ನಾಗಮಂಗಲ:

ದೇವಾಲಯದ ಪೂಜೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವಿನ ಸಂಘರ್ಷದಿಂದ ದೇವಾಲಯಕ್ಕೇ ಬೀಗ ಹಾಕಿದ ಘಟನೆ ತಾಲೂಕಿನ ಕಸಬಾ ಹೋಬಳಿಯ ಮುಳಕಟ್ಟೆಯಲ್ಲಿ ಮಂಗಳವಾರ ಸಂಭವಿಸಿದೆ.
ನಾಡಿನಾದ್ಯಾಂತ ಅಪಾರ ಭಕ್ತರನ್ನು ಹೊಂದಿರುವ ಇತಿಹಾಸ ಪ್ರಸಿದ್ಧ ಶ್ರೀ ಮುಳಕಟ್ಟಮ್ಮ ದೇವಿ ದೇವಸ್ಥಾನದ ಪೂಜೆಯ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಕಳೆದ 21 ವರ್ಷಗಳಿಂದ ವಿವಾದ ನಡೆಯುತ್ತಲೇ ಬಂದಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ಗ್ರಾಮದ ಮಹೇಶ್ ಎಂಬುವರಿಗೆ ಪೂಜಾರಿಕೆ ಮಾಡಲು ನ್ಯಾಯಾಲಯ 2010ರಲ್ಲಿ ತೀರ್ಪು ನೀಡಿತ್ತು. ಅರ್ಚಕ ಮಹೇಶ್ ಮತ್ತು ಮುಳಕಟ್ಟಮ್ಮ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸಮಸ್ಯೆ ಇತ್ಯರ್ಥವಾಗದೆ ಹಾಗೇ ಮುಂದುವರೆದುಕೊಂಡು ಬಂದಿತ್ತು.
ಮಹೇಶ್ ಎಂಬ ಅರ್ಚಕ ನ್ಯಾಯಾಲಯದ ತೀರ್ಪಿನಂತೆ ದೇವರಿಗೆ ಪೂಜೆ ಮಾಡಲು ಹಕ್ಕಿರುವುದಾಗಿ ಹೇಳಿ ಮಂಗಳವಾರ ಬೆಳಿಗ್ಗೆ ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಈ  ಹಿಂದೆ ಪೂಜೆ ಮಾಡುತ್ತಿದ್ದ ಪೂಜಾರಿ ಅದಕ್ಕೆ ಅವಕಾಶ ಕೊಡಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನರಿತ ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ರವಿಶಂಕರ್ ಅವರು ದೇವಸ್ಥಾನಕ್ಕೆ ಬೀಗ ಜಡಿದು ಸಂದಾನಕ್ಕೆ ಬರುವಂತೆ ಎರಡೂ ಬಣಗಳಿಗೂ ಸೂಚಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!