ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ವರದಿ, ಹಾವೇರಿ:
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಘೋಷಣೆಯ ನಂತರ ಮೇ 2 ರಂದು ನಡೆದ ಹಿಂಸಾತ್ಮಕ ಘಟನೆಗಳು ರಾಜಕೀಯ ವ್ಯವಸ್ಥೆಯನ್ನು ತೆಲೆತಗ್ಗಿಸುವಂತೆ ಮಾಡಿದೆ. ಕೂಡಲೇ ಪ್ರಧಾನಮಂತ್ರಿಗಳು ಮಧ್ಯ ಪ್ರವೇಶಿಸಿ ಹಿಂಸೆಯನ್ನು ತಡೆಯುವದಕ್ಕೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಬಿಜೆಪಿ ಜಿಲ್ಲಾ ಘಟಕದಿಂದ ಮನವಿ ಅರ್ಪಿಸಿದರು.
ಚುನಾವಣೆಗಳು ಸೋಲು ಮತ್ತು ಗೆಲುವಿಗೆ ಸೀಮತವಾಗಿರಬೇಕೆ ಹೊರತು ಕೋಲೆಯ ತನಕ ಹೋಗಬಾರದು. ಪಶ್ಚಿಮ ಬಂಗಾಳದಲ್ಲಿ ಎಲ್ಲವನ್ನು ಮೀರಿ ತೃಣಮೂಲ ಕಾಂಗ್ರೇಸ್ಸಿನ ಕಾರ್ಯಕರ್ತರು ಹಾಗೂ ಮಮತಾ ಬ್ಯಾನರ್ಜಿಯ ಹಿಂಬಾಲಕರು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಮನ ಬಂದಂತೆ ತಳಿಸುತ್ತಿರುವುದು, ಅವರ ಹೆಣ್ಣುಮಕ್ಕಳನ್ನು ಬಲತ್ಕಾರ ಮಾಡುತ್ತಿರುವುದು, ಅವರ ಮನೆ, ಅಂಗಡಿ ಹಾಗೂ ಅವರ ಆಸ್ತಿ ಪಾಸ್ತಿಗಳನ್ನು ಲೂಟಿ ಮಾಡುತ್ತಿರುವುದಷ್ಟೆ ಅಲ್ಲದೇ ಅನೇಕ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. ಬಿಜೆಪಿ ಮತದಾರರ ಮೇಲೆಯೂ ಈ ದಾಳಿಗಳನ್ನು ನಡೆಸಲಾಗುತ್ತಿದೆ. ಕಳೆದ 24 ಘಂಟೆಗಳಲ್ಲಿ ಅನೇಕ ಹಿಂಸಾಚಾರದ ಘಟನೆಗಳು ವರದಿಯಾಗಿವೆ.
ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವಂತಹ ಭಾರತದಲ್ಲಿನ ಒಂದು ರಾಜ್ಯ ದೇಶಕ್ಕೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಚುನಾವಣೆಗಳ ನಂತರ ಗೆದ್ದಂತ ಪಕ್ಷ ಸೋತಂತಹ ಪಕ್ಷದ ಕಾರ್ಯಕರ್ತರನ್ನು ಮುಲಾಜಿಲ್ಲದೆ ಕೋಲೆ ಮಾಡುತ್ತಿರುವುದು ನೋಡಿದರೆ ಅಲ್ಲಿನ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮಮತಾ ಬ್ಯಾನರ್ಜಿಯ ಕೈಗೊಂಬೆಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ ಎಗ್ಗಿಲ್ಲದೆ ಆಗುತ್ತಿರುವುದು ಆಂತಕ್ಕೆ ಈಡುಮಾಡಿದೆ.
ಕೂಡಲೇ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸೆಯನ್ನು ತಡೆಯುವುದಕೋಸ್ಕರ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಶಾಸಕ ನೆಹರು ಓಲೇಕಾರ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಪ್ರದೀಪ ಮುಳ್ಳೂರ, ಸಂತೋಷ ಆಲದಕಟ್ಟಿ ಸೇರಿದಂತೆ ಇತರರಿದ್ದರು.