ಹೊಸದಿಗಂತ ವರದಿ, ಬೀದರ:
ನಗರದ ಗಾಂಧೀ ಗಂಜ ಮಾರುಕಟ್ಟೆಯಲ್ಲಿ ಬ್ರಾಂಡೇಡ್ ಆಯಿಲ್ ಗಳ ಹೆಸರಿನಲ್ಲಿ ಕೆಳ ದರ್ಜೆಯ ಆಯಿಲ್ ಪ್ಯಾಕೇಜಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಟ್ರೇಡಿಂಗ್ ಅಂಗಡಿಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಬುಧವಾರ ಮಧ್ಯಾಹ್ನ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಗಾಂಧೀ ಗಂಜನಲ್ಲಿಯ ದಿಗ್ವಾಲ್, ಸಿಂದೋಲ ಹಾಗೂ ಮಂತ್ರಿ ಆಯಿಲ್ ರೀಪ್ಯಾಕರ್ಸ್ ಗೋದಾಮಿನಲ್ಲಿ ಬ್ರಾಡೇಡ್ ಆಯಿಲ್ ಗಳಾದ ಸೋಯಾ ರುಚಿ ಗೋಲ್ಡ್, ಫಾರ್ಚೂನ್, ನ್ಯಾಚುರಲ್, ಸನ್ ಫ್ಲವರ್ ಸೇರಿದಂತೆ ವಿವಿಧ ಬ್ರಾಂಡಿನ ಹೆಸರಿನ ಡುಬ್ಲಿಕೇಟ್ ಪ್ಯಾಕೇಜಿಂಗ್ ಮಾಡಿದ್ದು, ಹೈದರಾಬಾದ್ ನಿಂದ ಕಳಪೆ ಮಟ್ಟದ ಆಯಿಲನ್ನು ಟ್ಯಾಂಕರ್ ಮೂಲಕ ತರಿಸಿ ಪ್ಯಾಕೇಜಿಂಗ್ ಮಾಡಿ ಮಾರಾಟ ಮಾಡಲಾಗುತ್ತಿತ್ತು. ದಸರಾ, ದೀಪಾವಳಿಯ ಸಮಯದಲ್ಲಿ ಹೋಲಸೇಲ್ ಗೆ ಭಾರಿ ಬೇಡಿಕೆ ಇರುತ್ತದೆ ಅದಕ್ಕೇಂದು 3-4 ಟ್ಯಾಂಕರ್ ಕಳಪೆ ಗುಣಮಟ್ಟದ ಆಹಾರಕ್ಕೆ ಬಳಸುವ ಎಣ್ಣೆ ಇತ್ತಿಚೆಗೆ ಬೀದರಿಗೆ ಬಂದಿರುವ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಈ ಕುರಿತು ಗಾಂಧೀಗಂಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.