Wednesday, August 10, 2022

Latest Posts

ರಸ್ತೆ ಬದಿ ತ್ಯಾಜ್ಯ ಸುರಿಯುತ್ತಿದ್ದ ಕಂಪನಿಗೆ 5 ಸಾವಿರ ರೂ. ದಂಡ ಹಾಕಿದ ನಗರಪಾಲಿಕೆ ಅಧಿಕಾರಿಗಳು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮೈಸೂರು:

ರಸ್ತೆ ಬದಿ ಕೈಗಾರಿಕೆಯ ತ್ಯಾಜ್ಯವನ್ನು ಸುರಿಯುತ್ತಿದ್ದ ಕಂಪನಿಯೊಂದಕ್ಕೆ ಮೈಸೂರು ನಗರಪಾಲಿಕೆಯ ಅಧಿಕಾರಿಗಳು 5 ಸಾವಿರ ರೂ. ದಂಡ ವಿಧಿಸಿದ್ದಾರೆ.
ಹೆಬ್ಬಾಳಿನ ರಿಂಗ್ ರಸ್ತೆ ಬಳಿ ಅನಧಿಕೃತವಾಗಿ ಗೂಡ್ಸ್ ವಾಹನದಲ್ಲಿ ತುಂಬಿಕೊಂಡ ತಂದ ಇಂಡಸ್ಟ್ರಿಯಲ್ ತ್ಯಾಜ್ಯವನ್ನು ಸುರಿಯಲಾಗುತ್ತಿತ್ತು. ಖಚಿತ ಮಾಹಿತಿ ಮೇಲೆ ಸ್ಥಳಕ್ಕೆ ಧಾವಿಸಿದ ನಗರಪಾಲಿಕೆಯ ವಲಯ ಆಯುಕ್ತ ಕೃಷ್ಣ  ನೇತೃತ್ವದ ತಂಡ, ಅಲ್ಲಿ ಕಸ ಸುರಿಯುವುದನ್ನು ತಡೆಯಿತು. ಅಲ್ಲದೇ  ಅವರಿಂದಲೇ ಕಸವನ್ನು ವಿಲೇವಾರಿಯನ್ನು ನಿಗದಿತ ಸೂಕ್ತ ಮಾಡಿಸಿತ್ತಲ್ಲದೇ  5000 ರೂ. ಗಳ ದಂಡವನ್ನು ವಿಧಿಸಿ, ಇನ್ನು ಮುಂದೆ ಈ ರೀತಿ ರಸ್ತೆ ಬದಿಯಲ್ಲಿ ಕಸ ತಂದು ಸುರಿಯದಂತೆ ಎಚ್ಚರಿಕೆ ನೀಡಿತು. ಈ ವೇಳೆ ಆರೋಗ್ಯ ನಿರೀಕ್ಷಕ್ಷಿ ನಮ್ರತ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss