ಅಫೀಷಿಯಲ್ ಆಗಿ ಮಾವ ಆಗಿದ್ದೇನೆ: ಮಗಳ ಮದುವೆಯ ಖುಷಿ ಹಂಚಿಕೊಂಡ ಸುನಿಲ್ ಶೆಟ್ಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಪುತ್ರಿ, ನಟಿ ಅಥಿಯಾ ಶೆಟ್ಟಿ (Athiya Shetty) ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ (Kl Rahul) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಗಳ ಮದುವೆಯನ್ನು ಸುನಿಲ್ ಶೆಟ್ಟಿ ಸಂಭ್ರಮಿಸಿದ್ದಾರೆ.
`ಹೀರೋ’ ಸಿನಿಮಾ ಮೂಲಕ ಬಾಲಿವುಡ್‌ಗೆ ಪರಿಚಿತರಾದ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಸಿನಿಮಾಗೆ ಬೈ ಹೇಳಿ ಹೊಸ ಬಾಳಿಗೆ ನಟಿ ಕಾಲಿಟ್ಟಿದ್ದಾರೆ.

ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಅಥಿಯಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದರು.

ಪುತ್ರಿ ಅಥಿಯಾ ಮದುವೆಯ ಬಳಿಕ ಸುನೀಲ್ ಶೆಟ್ಟಿ ಮತ್ತು ಮಗ ಆಹಾನ್ ಶೆಟ್ಟಿ (Ahan Shetty) ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮಗಳ ಮದುವೆ ಕುಟುಂಬಸ್ಥರ ಮುಂದೆ ಸಂಭ್ರಮದಿಂದ ನಡೆಯಿತು. ಮಕ್ಕಳು ಖುಷಿಯಾಗಿದ್ದಾರೆ. ಇದೀಗ ನಾನು ಅಫಿಷಿಯಲ್ ಆಗಿ ಮಾವ ಆಗಿದ್ದೇನೆ ಎಂದು ಸಂತಸದಿಂದ ಸುನೀಲ್ ಶೆಟ್ಟಿ ಮಾತನಾಡಿದ್ದಾರೆ. ಇನ್ನೂ ಐಪಿಎಲ್ ಮ್ಯಾಚ್ ಬಳಿಕ ಸಿನಿಮಾರಂಗದ ಸ್ನೇಹಿತರಿಗೆ ಆಪ್ತರಿಗೆ ಆರತಕ್ಷತೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

ಮುದ್ದು ಮಗಳು ಅಥಿಯಾ ಮದುವೆ ಖುಷಿಯಲ್ಲಿ ಮಾಧ್ಯಮ ಮಿತ್ರರಿಗೆ ಸುನೀಲ್ ಶೆಟ್ಟಿ ಮತ್ತು ಪುತ್ರ ಆಹಾನ್ ಶೆಟ್ಟಿ ಧನ್ಯವಾದ ತಿಳಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನವಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!