ಅಧಿಕಾರಿಗಳ ದಾಳಿ: ಅನಧಿಕೃತ ಇಟ್ಟಿಗೆ ಕಾರ್ಖಾನೆ ಮುಟ್ಟುಗೋಲು

ಹೊಸದಿಗಂತ ವರದಿ ಸೋಮವಾರಪೇಟೆ: ಕೊಡ್ಲಿಪೇಟೆ ಸಮೀಪದ ದೊಡ್ಡಕೊಡ್ಲಿ ಗ್ರಾಮದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಇಟ್ಟಿಗೆ ಕಾರ್ಖಾನೆಗೆ ಸೋಮವಾರಪೇಟೆ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಕಾರ್ಖಾನೆಯನ್ನು ಮುಟ್ಟಗೋಲು ಹಾಕಿಕೊಂಡಿದ್ದಾರೆ. ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಹೋಬಳಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ದಿವಾಕರ, ವಿಜಯ ಹಾಗೂ ಪ್ರದೀಪ್ ಎಂಬವರ ಮಾಲಕತ್ವದಲ್ಲಿ ಅನಧಿಕೃತವಾಗಿ ಇಟ್ಟಿಗೆ ಕಾರ್ಖಾನೆ ನಡೆಸಲಾಗುತ್ತಿತ್ತು. ವಿಷಯ ತಿಳಿದ ಸೋಮವಾರಪೇಟೆ ತಹಶೀಲ್ದಾರರ ನೇತೃತ್ವದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖಾಧಿಕಾರಿಗಳು ಜಂಟಿ ದಾಳಿ ನಡೆಸಿದರು. … Continue reading ಅಧಿಕಾರಿಗಳ ದಾಳಿ: ಅನಧಿಕೃತ ಇಟ್ಟಿಗೆ ಕಾರ್ಖಾನೆ ಮುಟ್ಟುಗೋಲು