ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟ ಕಾರಣ ಮೊಬೈಲ್ ಟಾರ್ಚ್ ಬಳಕೆ ಮಾಡಿ ಚಿಕಿತ್ಸೆ ನೀಡಲಾಗಿದೆ.
ರಾತ್ರಿ 10 ಗಂಟೆ ಸುಮಾರಿಗೆ ಜಿಮ್ಸ್ ಆಸ್ಪತ್ರೆಯ ನವಜಾತ ಶಿಶು ಘಟಕದಲ್ಲಿ ಏಕಾಏಕಿ ವಿದ್ಯುತ್ ಕಡಿತವಾಗಿತ್ತು. ಇದರಿಂದ, ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಟ್ನಲ್ಲಿ ಚಿಕ್ಕ ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು. ಇದರಿಂದ ಪೋಷಕರು ಆತಂಕಗೊಂಡಿದ್ದರು.
ಸುಮಾರು ಒಂದೇರಡು ಗಂಟೆಗಳ ಬಳಿಕ ಇಡೀ ಕರೆಂಟ್ ಬಂತು. ರೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನವಜಾತ ಶಿಶು ಘಟಕದ ಟ್ರಾನ್ಸಫಾರ್ಮರ್ ಕೈಕೊಟ್ಟಿದ್ದರಿಂದ ಈ ಘಟನೆ ಸಂಭವಿಸಿದೆ, ಅದನ್ನು ತಕ್ಷಣವೇ ಸರಿಪಡಿಸಿದ್ದೆವೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
ಆದರೆ, ಏಳು ಕಂದಮ್ಮಗಳು ಇರುವ ವಾರ್ಡ್ನಲ್ಲಿ ಕನಿಷ್ಠಪಕ್ಷ ಜನರೇಟರ್ ಅಥವಾ ಯುಪಿಎಸ್ ವ್ಯವಸ್ಥೆಯಾದರೂ ಮಾಡಬೇಕಿತ್ತು. ಈ ವಾರ್ಡ್ನಲ್ಲಿ ಐಸಿಯೂ, ಎನ್ಸಿಯೂ ಘಟಕಗಳಿವೆ. ಸ್ವಲ್ಪ ಯಾಮಾರಿದ್ದರೂ ದೊಡ್ಡ ಅನಾಹುತವೇ ಸಂಭವಿಸಿರುತ್ತಿತ್ತು. ಆದರೆ, ದೇವರ ದಯೆಯಿಂದ ಯಾವುದೇ ಅನಾಹುತ ಸಂಭವಿಸಲ್ಲ. ಜಿಮ್ಸ್ ಆಸ್ಪತ್ರೆಯಲ್ಲಿ ಇಂತಹ ಯಡವಟ್ಟು ಇದೆ ಮೊದಲೆನಲ್ಲ ಎಂದು ರೋಗಿಯ ಸಂಬಧಿಕರು ಹೇಳಿದ್ದಾರೆ.