ಚಾಲಾಕಿ ಕಳ್ಳರು: ಚಲಿಸುತ್ತಿದ್ದ ರೈಲಿನಿಂದ ತೈಲ ಕದ್ದ ಖದೀಮರು, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಸ್ತೆ, ಸೇತುವೆ, ಟವರ್, ಬಸ್ ಮಾತ್ರವಲ್ಲದೆ ಇದೀಗ ರೈಲುಗಳಲ್ಲಿ ಸಾಗಿಸುವ ತೈಲ ಟ್ಯಾಂಕರ್‌ಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ತೈಲವನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ತೈಲ ಡಿಪೋಗೆ ಸಾಗಿಸಲಾಗುತ್ತಿತ್ತು.  ಮಾರ್ಗಮಧ್ಯೆ ಗೂಡ್ಸ್ ರೈಲು ಸೇತುವೆಯೊಂದರ ಬಳಿ ಬಂದಾಗ ದರೋಡೆಕೋರರು ಗುಂಪೊಂದು ತೈಲದ ಟ್ಯಾಂಕರ್‌ ಪೈಪ್‌ ತೆರೆದು  ಬಕೆಟ್‌ಗಳಲ್ಲಿ ತುಂಬಿಸಿಕೊಂಡಿದ್ದಾರೆ. ಅಷ್ಟರಲ್ಲಿ ಆ ಮಾರ್ಗವಾಗಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಆ ಸೇತುವೆ ತಲುಪಿದಾಗ ರೈಲು ನಿಧಾನವಾಗುತ್ತದೆ ಎಂದು ಮೊದಲೇ ತಿಳಿದಿದ್ದ ದರೋಡೆಕೋರರು, ಇಂತಹ ಕೃತ್ಯಕ್ಕೆ ಕೈ ಹಾಕಿದರು. ತೈಲ ಟ್ಯಾಂಕರ್‌ಗಳೊಂದಿಗೆ ರೈಲು ಸೇತುವೆಯ ಬಳಿಗೆ ಬಂದ ತಕ್ಷಣ ಅವರು ತಮ್ಮ ಕೆಲಸವನ್ನು ಪ್ರಾರಂಭಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!