spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎರಡು ದಿನದಲ್ಲಿ ₹ 1,100 ಕೋಟಿ ವಹಿವಾಟಾಯ್ತು ಎಂದಿದೆ ಒಲಾ

- Advertisement -Nitte

ಹೊಸದಿಗಂತ ಆನ್ಲೈನ್ ಡೆಸ್ಕ್:

1,100 ಕೋಟಿ ರುಪಾಯಿಗಳು

ಇದು ಒಲಾ ಎರಡು ದಿನಗಳಲ್ಲಿ ಮಾರಿರುವ ವಿದ್ಯುತ್ ಚಾಲಿತ ಸ್ಕೂಟರುಗಳ ವಹಿವಾಟಿನ ಮೊತ್ತ. ಅದರೊಂದಿಗೆ ವಿದ್ಯುತ್ ಸ್ಕೂಟರುಗಳ ಕ್ರಾಂತಿಗೆ ಚಾಲನೆಯ ಕಿಡಿ ಸೋಂಕಿದಂತಾಗಿದೆ. ಇದಕ್ಕೂ ಮೊದಲು ಕೆಲವು ತಾಂತ್ರಿಕ ಕಾರಣಗಳಿಂದ ಮಾರಾಟದ ದಿನವನ್ನು ಒಲಾ ಮುಂದೂಡಿದ್ದಾಗ ಸಹಜವಾಗಿಯೇ ಅನುಮಾನಗಳೆದ್ದಿದ್ದವು. ಆದರೆ, ಎರಡು ಶ್ರೇಣಿಗಳಲ್ಲಿ ಬಿಕರಿಯಾಗುತ್ತಿರುವ ಒಲಾ ಸ್ಕೂಟರುಗಳ ವೇಗ ಇದೀಗ ವಿದ್ಯುತ್ ಚಾಲಿತ ವಾಹನಗಳ ವಿಭಾಗದಲ್ಲಿ ಸ್ಕೂಟರಿನ ಪ್ರಯಾಣವಂತೂ ವಿಧಿವತ್ತಾಗಿ ಶುರುವಾಗಿರುವುದರ ಸೂಚನೆ ಕೊಡುತ್ತಿದೆ. 

ಈಗ ಮಾರಾಟವಾಗುತ್ತಿರುವ ಒಲಾ ಸ್ಕೂಟರುಗಳು ಅದಾಗಲೇ ಬುಕಿಂಗ್ ಆದಂಥವು. ಹೊಸತಾಗಿ ಬುಕ್ ಮಾಡಬೇಕು ಅಂದುಕೊಂಡವರು ನವೆಂಬರ್ 1ರವರೆಗೂ ಕಾಯಬೇಕು.

 

ವಿದ್ಯುತ್ ಚಾಲಿತ ಸ್ಕೂಟರ್ ವಿಭಾಗದಲ್ಲಿರುವುದು ಒಲಾ ಮಾತ್ರವೇ ಅಲ್ಲ. ಆದರೆ, ಅದು ಹೆಚ್ಚಾಗಿ ಸುದ್ದಿಯಲ್ಲಿರುವುದಕ್ಕೆ ಕಾರಣ ಅದರ ವಿಸ್ತಾರದ ಉತ್ಪಾದನಾ ಸಾಮರ್ಥ್ಯ. ಈ ಬಗ್ಗೆ ಹೆಚ್ಚಿನ ಓದಿಗೆ- ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ಕ್ರಾಂತಿಗೆ ಸಾರಥ್ಯ ವಹಿಸೀತೇ ಸ್ಕೂಟರ್?

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss