2024ಕ್ಕೆ ಎಲೆಕ್ಟ್ರಿಕ್‌ ಕಾರುಗಳನ್ನು ಉತ್ಪಾದಿಸಲಿದೆ ಓಲಾ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಪ್ರಸಿದ್ಧ ಎಲೆಕ್ರ್ಟಿಕ್‌ ಸ್ಕೂಟರ್‌ ತಯಾರಿಕಾ ಕಂಪನಿಗಳಲ್ಲಿ ಒಂದಾದ ಓಲಾ ಎಲೆಕ್ಟ್ರಿಕ್‌ ಕಂಪನಿಯು 2024ರ ವೇಳೆಗೆ ಎಲೆಕ್ಟ್ರಿಕ್‌ ಕಾರುಗಳನ್ನು ಉತ್ಪಾದಿಸಲಿದೆ. ಈ ಕುರಿತು ಓಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವೀಶ್‌ ಅಗರ್ವಾಲ್‌ ಘೋಷಿಸಿದ್ದು 500 ಕಿಮೀ ವ್ಯಾಪ್ತಿಯೊಂದಿಗೆ 2024ರ ವೇಳೆಗೆ ಎಲೆಕ್ಟ್ರಿಕ್‌ ಕಾರುಗಳನ್ನು ಉತ್ಪಾದಿಸಲಾಗುತ್ತದೆ ಎಂದಿದ್ದಾರೆ.

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಜೊತೆಗಿನ ವರ್ಚುವಲ್ ಈವೆಂಟ್‌ನಲ್ಲಿ ಯೋಜನೆಗಳನ್ನು ಘೋಷಿಸಿದ ಅಗರ್ವಾಲ್‌ “ಇದು ಭಾರತದಲ್ಲಿ ಇದುವರೆಗೆ ಕೈಗೊಂಡಿರುವ ಅತ್ಯಂತ ಮಹತ್ವಾಕಾಂಕ್ಷೆಯ ಕಾರು ಯೋಜನೆಯಾಗಿದೆ” ಎಂದಿದ್ದಾರೆ.

ತಮಿಳುನಾಡಿನ ಪೋಚಂಪಲ್ಲಿಯಲ್ಲಿರುವ ಓಲಾ ‘ಫ್ಯೂಚರ್ ಫ್ಯಾಕ್ಟರಿ’ ಯನ್ನು ನಾಲ್ಕು ಚಕ್ರಗಳ ಕಾರ್ಖಾನೆ ಮತ್ತು ಸೆಲ್ ಪ್ಲಾಂಟ್‌ನೊಂದಿಗೆ ವಿಶ್ವದ ಅತಿದೊಡ್ಡ ಇವಿ ಹಬ್‌ ಆಗಿ ವಿಸ್ತರಿಸಲಾಗುವುದು ಎಂದು ಅಗರ್ವಾಲ್ ಹೇಳಿದ್ದಾರೆ.

OLA ಎಲೆಕ್ಟ್ರಿಕ್ ಪೋಚಂಪಲ್ಲಿಯಲ್ಲಿನ ತನ್ನ ಫ್ಯೂಚರ್ ಫ್ಯಾಕ್ಟರಿಯನ್ನು ಭಾರತದ ಅತಿದೊಡ್ಡ ಆಟೋ ಹಬ್‌ಗಳಲ್ಲಿ ಒಂದಾಗಿ ವಿಸ್ತರಿಸಲಿದೆ. ಹೊಸ ಸೌಲಭ್ಯಗಳಲ್ಲಿ 100 ಎಕರೆ ಲಿಥಿಯಂ ಅಯಾನ್ ಸೆಲ್ ಪ್ಲಾಂಟ್, 200 ಎಕರೆ ಇವಿ ಕಾರ್ ಪ್ಲಾಂಟ್ ಮತ್ತು ಇವಿ ಸ್ಕೂಟರ್ ಪ್ಲಾಂಟ್‌ಗಾಗಿ ಹೆಚ್ಚುವರಿ 40 ಎಕರೆಗಳಷ್ಟು ಜಾಗವಿರಲಿದೆ.

OLA EVಯ ಉತ್ಪಾದನೆಯು ಮೂರು ಹಂತಗಳಲ್ಲಿದ್ದು OLA ಸ್ಕೂಟರ್ ಕಾರ್ಖಾನೆಯು ವರ್ಷಕ್ಕೆ 10 ಮಿಲಿಯನ್ ಸ್ಕೂಟರ್‌ಗಳನ್ನು ಉತ್ಪಾದಿಸುತ್ತದೆ, OLA ಕಾರ್ ಫ್ಯಾಕ್ಟರಿ ವರ್ಷಕ್ಕೆ 1 ಮಿಲಿಯನ್ ಕಾರುಗಳನ್ನು ಉತ್ಪಾದಿಸುತ್ತದೆ ಮತ್ತು OLA ಗಿಗಾಫ್ಯಾಕ್ಟರಿ ವರ್ಷಕ್ಕೆ 100 GWh ಸೆಲ್‌ಗಳನ್ನು ಉತ್ಪಾದಿಸುತ್ತದೆ ಎಂದು ಅಗರ್ವಾಲ್ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!