ಗಾಲ್ವಾನ್ ಘರ್ಷಣೆಯಲ್ಲಿ ಭಾಗಿಯಾಗಿದ್ದ ಸೇನಾ ಅಧಿಕಾರಿ ಕೈಗೆ ಒಲಿಂಪಿಕ್ಸ್ ಜ್ಯೋತಿ: ನಿರ್ಧಾರ ಸಮರ್ಥಿಸಿಕೊಂಡ ಚೀನಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಲ್ವಾನ್ ಸಂಘರ್ಷದಲ್ಲಿ ಭಾಗಿಯಾಗಿದ್ದ ಸೇನಾ ಅಧಿಕಾರಿ ಚಳಿಗಾಲದ ಒಲಿಂಪಿಕ್ಸ್‌ನ ಸಾಂಪ್ರದಾಯಕ ಜ್ಯೋತಿ ಹಿಡಿದಿರುವುದನ್ನು ಚೀನಾ ಸಮರ್ಥಿಸಿಕೊಂಡಿದೆ. ಗಾಲ್ವಾನ್ ಘರ್ಷಣೆಯಲ್ಲಿ ಭಾಗಿಯಾಗಿದ್ದ ಪೀಪಲ್ಸ್ ಲಿಬರೇಶನ್ ಆರ್ಮಿ ರೆಜಿಮೆಂಟ್ ಕಮಾಂಡರ್ ಕ್ವಿ ಫಾಬಾವೋ ಅವರ ಕೈಗೆ ಒಲಿಂಪಿಕ್ಸ್ ಜ್ಯೋತಿ ನೀಡಿದ್ದು, ಇದಕ್ಕೆ ಭಾರತ ಆಕ್ಷೇಪಿಸಿತ್ತು.

ಚೀನಾ ಇದೀಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ಎಲ್ಲಾ ಮಾನದಂಡಗಳನ್ನು ಪೂರೈಸಿರುವ ಕಾರಣ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಆಯ್ಕೆಯನ್ನು ವಸ್ತುನಿಷ್ಠ ಮತ್ತು ತರ್ಕಬದ್ಧ ದೃಷ್ಟಿಕೋನದಿಂದ ನೋಡಬೇಕು ಎಂದು ಚೀನಾ ಹೇಳಿದೆ.

ಒಲಿಂಪಿಕ್ಸ್ ದೇಶಗಳ ನಡುವೆ ಸೇತುವೆಯಾಗಬೇಕು. ಕ್ವಿ ಅವರು ಜ್ಯೋತಿ ಹೊರುತ್ತಿರುವುದು ವಿಶಾಲ ಆಶಯಗಳನ್ನು ಪ್ರತಿಪಾದಿಸುತ್ತದೆ. ಎಲ್ಲ ಮಾನದಂಡಗಳನ್ನು ಅವರು ಪೂರೈಸುತ್ತಾರೆ. ರಾಜಕೀಯ ದೃಷ್ಟಿಕೋನದಿಂದ ಇದನ್ನು ನೋಡಬಾರದು ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.

ಗಾಲ್ವಾನ್ ಘರ್ಷನೆಯಲ್ಲಿ ಭಾಗಿಯಾಗಿದ್ದ ಕ್ವಿ ಫಾಬಾವೊ ಅವರ ಕೈಗೆ ಜ್ಯೋತಿ ನೀಡಿದ್ದನ್ನು ಭಾರತ ವಿರೋಧಿಸಿತ್ತು. ಚಳಿಗಾಲದ ಒಲಿಂಪಿಕ್ಸ್ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳನ್ನು ಭಾರತ ಬಹಿಷ್ಕರಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!