Saturday, August 13, 2022

Latest Posts

ಭಾರತ, ಪಾಕ್ ಸೇರಿದಂತ 24 ದೇಶಗಳ ವಿಮಾನ ಹಾರಾಟಕ್ಕೆ ನೋ ಎಂಟ್ರಿ ಎಂದ ಒಮನ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕು ವ್ಯಾಪಕವಾಗಿ ಹರಡುವ ಭೀತಿಯಿಂದ ಒಮನ್ ದೇಶ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ 24 ರಾಷ್ಟ್ರಗಳ ಪ್ರಯಾಣಿಕರ ವಿಮಾನ ಹಾರಾಟದ ಮೇಲೆ ನಿರ್ಬಂಧ ಹೇರಿದೆ.
ವಿಮಾನ ಹಾರಟ ನಿರ್ಬಂಧವನ್ನು ಅನಿರ್ಧಿಷ್ಟಾವಧಿಗೆ ವಿಸ್ತರಿಸಲಾಗಿದ್ದು, ಮುಂದಿನ ಸೂಚನೆವರೆಗೂ ಈ ಆದೇಶ ಜಾರಿಯಲ್ಲಿರಲಿದೆ.
ಯುಕೆ, ಟುನೀಶಿಯಾ, ಲೆಬನಾನ್, ಇರಾನ್, ಇರಾಕ್, ಲಿಬಿಯಾ, ಬ್ರೂನಿ, ಸಿಂಗಾಪುರ್, ಇಂಡೋನೇಷ್ಯಾ, ಫಿಲಿಪೈನ್ಸ್, ಇಥಿಯೋಪಿಯಾ, ಸುಡಾನ್, ಟಾಂಜಾನಿಯಾ, ದಕ್ಷಿಣ ಆಫ್ರಿಕಾ, ಘಾನಾ, ಸಿಯೆರಾ ಲಿಯೋನ್, ನೈಜೀರಿಯಾ, ಗಿನಿಯಾ, ಕೊಲಂಬಿಯಾ, ಅರ್ಜೆಂಟೀನಾ ಮತ್ತು ಬ್ರೆಜಿಲ್ ದೇಶಗಳು ಕೂಡ ಈ ಪಟ್ಟಿಯಲ್ಲಿ ಇದೆ.
ಒಮನ್ ನಲ್ಲಿ 1,675 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 3356 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ದೇಶದಲ್ಲಿ ಸೋಂಕಿನಿಂದ 3,356 ಮಂದಿ ಸಾವಿಗೀಡಾಗಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss